ಜನಮನ

ಮಗಳ ಸ್ಕೂಲ್ ಫೀಸ್ ಕಟ್ಟಲು ಮ್ಯಾರಥಾನ್ ಓಡಿ ಗೆದ್ದ ತಾಯಿ!

Views: 12

ಕನ್ನಡ ಕರಾವಳಿ ಸುದ್ದಿ: ಮಗಳ ಶಿಕ್ಷಣಕ್ಕಾಗಿ ಬೇಕಾದ ಶುಲ್ಕ ಪಾವತಿಸಲು ತಾಯಿಯೊಬ್ಬರು ಸೀರೆ ಉಟ್ಟು, ಬರಿಗಾಲಿನಲ್ಲೇ ಮ್ಯಾರಥಾನ್ ಓಡಿ ಜಯ ಗಳಿಸಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ 47 ವರ್ಷದ ರಮಾಬಾಯಿ ರಣವೀರ್ ಎಂಬ ಮಹಿಳೆಯೇ ಈ ಸಾಧನೆ ಮಾಡಿದವರು.

ಭಾರತೀಯ ಶಿಕ್ಷಣ ಪ್ರಸಾರಕ್ ಸಂಸ್ಥೆ ಯ ಖೋಲೇಶ್ವರ ಶೈಕ್ಷಣಿಕ ಸಂಕೀರ್ಣದ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. ಅಂಬಾಜೋಗೈನ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಿಂದ, ಭಾಗ್ಯನಗರ ಚೌಕ್‌ವರೆಗೂ ಈ ಮ್ಯಾರ ಥಾನ್ ನಡೆದಿತ್ತು. ಈ ಸ್ಪರ್ಧೆಯಲ್ಲಿ ಸ್ಥಳೀಯ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಭಾಗವಹಿಸಿದ ರಮಾ ಸೀರೆ ಉಟ್ಟು ಬರಿಗಾಲಲ್ಲಿ ಓಡಿ ಹಲವು ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ 3000 ರೂ. ನಗದು ಬಹುಮಾನ ಗೆದ್ದಿದ್ದಾರೆ. ಈ ಹಣವನ್ನು ಮಗಳ ಶಿಕ್ಷಣಕ್ಕಾಗಿ ಬಳಸುವುದಾಗಿ ರಮಾಬಾಯಿ ಹೇಳಿದ್ದಾರೆ.

ಈ ತಾಯಿಯ ಸಾಧನೆಯನ್ನು ಹಲವರು ಶ್ಲಾಘಿಸಿದ್ದಾರೆ. ಮಕ್ಕಳಿಗಾಗಿ ಪೋಷಕರು ಏನಾದರೂ ಮಾಡಲು ಹಿಂಜರಿ ಯುವುದಿಲ್ಲ ಎಂಬುದಕ್ಕೆ ರಮಾಬಾಯಿ ಅವರ ಸಾಧನೆ ಒಂದು ಉದಾಹರಣೆ.

Related Articles

Back to top button
error: Content is protected !!