ಸಾಂಸ್ಕೃತಿಕ

ಮಾಡೆಲ್ ಮಂಜಿತ್ ಕೌರ್ ಅಪಹರಿಸಿ, ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ವಿಕೃತ ಹತ್ಯೆ

Views: 35

ಕನ್ನಡ ಕರಾವಳಿ ಸುದ್ದಿ: ಇನ್ಸ್ಟಾಗ್ರಾಮ್ ಇನ್ಫ್ಲ್ಯುಯೆನ್ಸರ್ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮಂಜಿತ್ ಕೌರ್ ಎಂಬುವವರನ್ನು ಅಪಹರಿಸಿ, ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಆಸ್ಪತ್ರೆಯಲ್ಲಿ ಎರಡು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಅವರು ಆಗಸ್ಟ್ 26 ರಂದು ಚಂಡೀಗಢದ ಪಿಜಿಐಎಂಇಆರ್ ಮೃತಪಟ್ಟಿದ್ದಾರೆ.

ವಿಚ್ಛೇದಿತರಾಗಿದ್ದ ಮಂಜಿತ್ ಕೌರ್ (28) ಅವರು ಏಳು ವಾರಗಳ ಗರ್ಭಿಣಿಯಾಗಿದ್ದರು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪರಿಚಯಸ್ಥರಿಂದಲೇ ಈ ಕೃತ್ಯ ನಡೆದಿದೆ ಎಂದು ಅವರ ತಾಯಿ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ನಡೆದಿದ್ದು ಯಾವಾಗ, ಏನಾಗಿತ್ತು?

ಮಂಜಿತ್ ಅವರ ತಾಯಿ ಕೊಟ್ಟ ದೂರಿನ ಪ್ರಕಾರ, ಜುಲೈ.3ನೇ ತಾರೀಖಿನಂದು ಮಂಜಿತ್ ಕೌರ್ ಅವರು ಚಂಢೀಗಡದ ಸೆಕ್ಟರ್ 34ರ ಬಳಿ ಶುಭಿ ಮತ್ತು ಪಿಂಡಾ ಎನ್ನುವ ಪರಿಚಯಸ್ಥರನ್ನು ಭೇಟಿ ಮಾಡಲು ಮಂಜಿತ್ಗೆ ಬೆದರಿಕೆ ಹಾಕಲಾಗಿತ್ತು. ಇದರಿಂದ ಸ್ಥಳಕ್ಕೆ ತೆರಳಿದ್ದ ಅವರನ್ನು ಬಲವಂತವಾಗಿ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಪಂಜಾಬ್ನ ರೂಪಿನಗರ ಜಿಲ್ಲೆಯ ಮೊರಿಂದಾಗೆ ಕರೆದುಕೊಂಡು ತೆರಳಿದ್ದಾರೆ. ಅಲ್ಲಿ ಅವರ ಮೇಲೆ ಭೀಕರ ಹಲ್ಲೆ ಮಾಡಿ, ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾರೆ. ಮಂಜಿತ್ ಸ್ನೇಹಿತರೊಬ್ಬರು ಇದೇ ಸಮಯದಲ್ಲಿ ಅಲ್ಲಿಗೆ ಆಗಮಿಸಿ ಅವರನ್ನು ತಕ್ಷಣವೇ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನುವುದನ್ನು ಉಲ್ಲೇಖಿಸಲಾಗಿದೆ,

ಮೊದಲಿಗೆ ಮಂಜಿತ್ ಅವರನ್ನು ಮೊರಿಂಡಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆನಂತರ ಸೂಕ್ತ ಚಿಕಿತ್ಸೆಗಾಗಿ ಅವರನ್ನು ಮೊಹಾಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಸುಟ್ಟ ಗಾಯಗಳ ತೀವ್ರತೆಯಿಂದಾಗಿ ಜುಲೈ 9 ರಂದು ಪಿಜಿಐಎಂಇಆರ್ ಚಂಡೀಗಢಕ್ಕೆ ಅಡ್ಮಿಟ್ ಮಾಡಲಾಗಿತ್ತು ಎನ್ನಲಾಗಿದೆ.

ಹಲವು ವಾರಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಅವರು, ಆ.5ರಂದು ಕೊಂಚ ಮಾತನಾಡಲು ಶುರು ಮಾಡಿದರು. ಈ ವೇಳೆ ಪೋಷಕರ ಬಳಿ ಘಟನೆ ಬಗ್ಗೆ ವಿವರಿಸಿದ್ದಾರೆ, ಆದರೆ ಅದಾದ ಕೆಲವೇ ದಿನಕ್ಕೆ ಅವರ ಸ್ಥಿತಿ ಮತ್ತೆ ಹದಗೆಟ್ಟ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 26 ರಂದು ಸಾವನ್ನಪ್ಪಿದರು.

ತಲೆಮರೆಸಿಕೊಂಡಿರುವ ಶುಭಿ ಮತ್ತು ಪಿಂಡಾ ಎಂಬ ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ ಎನ್ನಲಾಗಿದೆ,

Related Articles

Back to top button
error: Content is protected !!