17ರ ಬಾಲಕನೊಂದಿಗೆ ಅಕ್ರಮ ಸಂಬಂಧ..ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಲೆ ಮಾಡಿದ ಪತ್ನಿ!
Views: 95
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾದ ಪತಿಯನ್ನೇ ಅನೈತಿಕ ಸಂಬಂಧಕ್ಕಾಗಿ ಬರ್ಬರವಾಗಿ ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಶಾಕಿಂಗ್ ಘಟನೆಯೊಂದು ಉತ್ತರಾಖಂಡದಲ್ಲಿ ಬೆಳಕಿಗೆ ಬಂದಿದೆ.
ಉತ್ತರಾಖಂಡದ ರಾಮನಗರ ನಿವಾಸಿ ಸಂಜೀವ್ ಕುಮಾರ್ (24) ಟೆಂಟ್ ಹೌಸ್ ವ್ಯಾಪಾರ ನಡೆಸುತ್ತಿದ್ದರು. ಐದು ವರ್ಷಗಳ ಹಿಂದೆ ಕುಟುಂಬದವರ ವಿರೋಧದ ನಡುವೆಯೂ ನಿಶಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು.
17ರ ಹರೆಯದ ಬಾಲಕನೊಂದಿಗೆ ಅಕ್ರಮ ಸಂಬಂಧ: ಪತಿಯ ಟೆಂಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ನಿಶಾಗೆ ಅನೈತಿಕ ಸಂಬಂಧ ಶುರುವಾಗಿದೆ. ಇದಕ್ಕೆ ಪತಿ ಅಡ್ಡವಾಗಿದ್ದಾನೆಂದು ಭಾವಿಸಿ ಆತನನ್ನು ಮುಗಿಸಲು ಸಂಚು ರೂಪಿಸಿದ್ದಾಳೆ.
ಆಗಸ್ಟ್ 16 ರಂದು ಹುಟ್ಟುಹಬ್ಬದ ಪಾರ್ಟಿ ನೆಪದಲ್ಲಿ ಸಂಜೀವ್‌ನನ್ನು ಕಾರೊಂದರಲ್ಲಿ ಕರೆದೊಯ್ಯಲಾಗಿದೆ. ಸಂಜೀವ್ ಡ್ರೈವ್ ಮಾಡುತ್ತಿದ್ದಾಗ, ಹಿಂಬದಿಯ ಸೀಟಿನಲ್ಲಿದ್ದ ಅಪ್ರಾಪ್ತ ಬಾಲಕ ಆತನ ಕುತ್ತಿಗೆಗೆ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ್ದು, ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪತಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ನಿಶಾ ಎಲ್ಲರನ್ನೂ ನಂಬಿಸಲು ನೋಡಿದ್ದಳು. ಆದರೆ, ಶವಪರೀಕ್ಷೆ ವೇಳೆ ಸಂಜೀವ್ ಕುತ್ತಿಗೆ ಭಾಗದಲ್ಲಿ ಗನ್‌ನ ಗುಂಡು ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಪೊಲೀಸರು ಪತ್ನಿ ನಿಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಹತ್ಯಾಕಾಂಡ ಬಯಲಾಗಿದೆ.
ಪ್ರಸ್ತುತ ಪೊಲೀಸರು ಆರೋಪಿ ನಿಶಾ ಹಾಗೂ ಕೊಲೆಗೆ ಸಾಥ್ ನೀಡಿದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.






