“ಯೋಗವನ್ನು ಮೀರಿ ವ್ಯಾಪಾರ ಸಾಮ್ರಾಜ್ಯ ವಿಸ್ತರಣೆ” ರಾಮ್ದೇವ್ ಹೇಳಿಕೆಗೆ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ತಿರುಗೇಟು
Views: 0
ಕನ್ನಡ ಕರಾವಳಿ ಸುದ್ದಿ: ಯೋಗ ಗುರು ರಾಮ್ದೇವ್ ತನ್ನ ಬಾಲ್ಯ ಮತ್ತು ಯೌವನದ ಕುರಿತಾಗಿ ನೀಡಿದ ಹೇಳಿಕೆಗಳಿಗೆ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ರಾಮ್ ದೇವ್ ನನ್ನ ಬೆಡ್ರೂಂನಲ್ಲಿ ಬಾವಲಿಯಂತೆ ನೇತಾಡುತ್ತಿದ್ದರೇ? ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ ರಣಾವತ್, ಯೋಗ ಮತ್ತು ಆಯುರ್ವೇದದಿಂದ ವ್ಯವಹಾರದತ್ತ ರಾಮ್ದೇವ್ ಅವರ ಬದಲಾವಣೆ ಬಗ್ಗೆ ಪ್ರಶ್ನಿಸಿದರು. ನನಗೆ ವ್ಯಕ್ತಿತ್ವದ ಬಗ್ಗೆ ರಾಮ್ ದೇವ್ ಪಾಠ ಹೇಳಬಾರದು ಎಂದು ಕಂಗನಾ ಹೇಳಿದ್ದಾರೆ.
ಸಂದರ್ಶನದಲ್ಲಿ ಸನಾತನ ಸಿದ್ಧಾಂತದೊಂದಿಗೆ ಗುರುತಿಸಿಕೊಳ್ಳುವ ರಾಮ್ದೇವ್ ಅವರು ನಿಮ್ಮನ್ನು ವಿರೋಧಿಸುವ ಹಂತಕ್ಕೆ ಹೇಗೆ ಬಂದರು? ಎಂದು ಕಂಗನಾ ಅವರಲ್ಲಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ರಾಮ್ ದೇವ್ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.
ಅವರ ಸ್ವದೇಶಿ ಚಳವಳಿ ಆರಂಭವಾದಾಗ ಸರಕಾರವು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿತ್ತು. ಆದರೆ, ಅವರು ಬಂಡವಾಳಶಾಹಿಯತ್ತ ಸಾಗಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಕಂಗನಾ ಹೇಳಿದರು. ರಾಮದೇವ್ ಅವರು ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗವನ್ನು ಮೀರಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ ಎಂದು ಕಂಗನಾ ಟೀಕಿಸಿದ್ದಾರೆ.
ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗ ಕ್ಷೇತ್ರಗಳಲ್ಲಿ ಅವರಿಗೆ ದೊರೆತ ಪ್ರೋತ್ಸಾಹದಿಂದಾಗಿ ಇದೀಗ ಅವರು ಒಳಉಡುಪು ಮತ್ತು ಬನಿಯನ್ಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೂ ಮುಂದಾಗಿದ್ದಾರೆ ಎಂದು ಹೇಳಿದರು.
ರಾಮ್ದೇವ್ ಅವರನ್ನು ಸಂಪೂರ್ಣ ಉದ್ಯಮಿ ಎಂದು ಕರೆದ ಕಂಗನಾ, ಉದ್ಯಮಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೀವು ಏನಾಗಿಲ್ಲವೋ ಆ ವೇಷವನ್ನು ಧರಿಸಬೇಡಿ ಎಂದು ಹೇಳಿದರು.
?






