ಯುವಜನ

ನಿಂತಿದ್ದ ಏಸ್ ವಾಹನಕ್ಕೆ ಬೈಕ್ ಡಿಕ್ಕಿ: ಮೂವರು ಯುವಕರು ಸಾವು

Views: 69

ಕನ್ನಡ ಕರಾವಳಿ ಸುದ್ದಿ: ಈದ್ ಮಿಲಾದ್‌ ಸಂಭ್ರಮದಲ್ಲಿ ಭಾಗಿಯಾಗಲು ಗದಗ ಜಿಲ್ಲೆಯ ನರಗುಂದದಿಂದ ಕೊಪ್ಪಳಕ್ಕೆ ಬೈಕ್‌ ಮೇಲೆ ತೆರಳುತ್ತಿದ್ದ ಮೂವರು ಯುವಕರು ಬುಧವಾರ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರೂ ಸ್ಥಳದಲ್ಲಿ ಮೃತಟ್ಟಿದ್ದಾರೆ.

ಬನ್ನಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ದುರ್ಘಟನೆ ನಡೆದಿದ್ದು ನರಗುಂದದ ಮಾಬುಸಾಬ್ ಬುಡೇನಸಾಬ್ ಮಟಗೇರಿ (17), ಫಕ್ರುಸಾಬ್ ಹಸನಸಾಬ್ (18), ಚಾನುಸಾಬ್ ಮುಕ್ತಮ್ ಸಾಬ್ (15) ಮೃತರು. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟವರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು

Related Articles

Back to top button
error: Content is protected !!