ಮದುವೆಯಾದ ಒಂದೇ ತಿಂಗಳಿಗೆ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿ!
Views: 95
ಕನ್ನಡ ಕರಾವಳಿ ಸುದ್ದಿ: ಮನೆಗೆ ಬಂದ ಪತಿಯೊಬ್ಬನಿಗೆ ತನ್ನ ಪತ್ನಿ ಬೇರೋಬ್ಬ ಯುವಕನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದು ಕಂಡಿದ್ದಾನೆ. ಆ ಕೂಡಲೇ ಪ್ರಿಯಕರನ ಜೊತೆ ಸೇರಿ ಪತಿಯ ಕತ್ತು ಹಿಸುಕಲು ಯತ್ನಿಸಿದ್ದಾಗಿ, ನಿದ್ರೆ ಬರುವ ಮಾತ್ರೆ ಕೊಟ್ಟಿದ್ದಾಗಿ ಸಂತ್ರಸ್ತ ಯುವಕ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರಗಾಂವ್ ಗ್ರಾಮದಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ
ಚಿರಗಾಂವ್ ಗ್ರಾಮದ ಸಂತ್ರಸ್ತ ವ್ಯಕ್ತಿ ಕೊಟ್ಟ ದೂರಿನಲ್ಲಿ ಹೀಗಿದೆ, ಮಧ್ಯಪ್ರದೇಶದ ಭಾಂಡೇರ್ ನಿವಾಸಿಯಾದ ಮಹಿಳೆಯನ್ನು ಜೂನ್ 24 ರಂದು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಡಲಾಗಿತ್ತು. ಮದುವೆಯಾಗಿ ಇನ್ನೂ ಒಂದೂವರೆ ತಿಂಗಳಿರುವಾಗಲೇ ಆಕೆ ತನ್ನ ಪ್ರಿಯಕರನ ಜೊತೆ ಸಂಬಂಧ ಬೆಳೆಸಿರುವುದು ತಿಳಿದುಬಂದಿದೆ ಎನ್ನಲಾಗಿದೆ.
ಆ.19ರಂದು ನನ್ನ ಪತ್ನಿ ಒಬ್ಬಂಟಿಯಾಗಿದ್ದಾಗ ಒಬ್ಬ ಯುವಕ ನನ್ನ ಮನೆಗೆ ಎರಡು ಬಾರಿ ಬಂದ ಬಗ್ಗೆ ನನಗೆ ನೆರೆ ಮನೆಯವರು ತಿಳಿಸಿದ್ದರು. ಈ ಬಗ್ಗೆ ಆಕೆಯ ಬಳಿ ಪ್ರಶ್ನೆ ಮಾಡಿದಾಗ ಎಲ್ಲ ಸುಳ್ಳು ಎಂದು ನಿರಾಕರಿಸಿದಳು.
ಅದೇ ವ್ಯಕ್ತಿ ಆ.23ರಂದು ಈ ವ್ಯಕ್ತಿ ಮನೆಯಲ್ಲಿದ್ದಾನೆ ಎನ್ನುವುದು ತಿಳಿದುಬಂತು. ಆಗ ಮನೆಗೆ ತೆರಳಿದಾಗ, ಇಬ್ಬರು ಅಸಹ್ಯವಾಗಿ ಕಾಣಿಸಿಕೊಂಡರು. ಅದೇ ದಿನ ಆಕೆ ನನ್ನ ಕೈ ಗಟ್ಟಿಯಾಗಿ ಹಿಡಿದು ನಿಂತರೆ, ಆತ ನನ್ನ ಕತ್ತು ಹಿಸುಕಲು ಯತ್ನಿಸಿದ. ಇವರಿಬ್ಬರಿಂದ ನನ್ನನ್ನು ರಕ್ಷಿಸಲು ಕಿರುಚಾಟ ಕೇಳಿ ಸಾರ್ವಜನಿಕರು ಮನೆಗೆ ಬಂದರು, ಜೊತೆಗೆ ಪೊಲೀಸರಿಗೆ ದೂರು ಕೊಟ್ಟರು. ಇಷ್ಟೇ ಅಲ್ಲದೇ ಆಕೆ ನನ್ನ ಆಹಾರದಲ್ಲಿ ನಿದ್ರೆ ಬರುವ ಮಾತ್ರೆ ಹಾಕಲು ಯತ್ನಿಸಿದ್ದಾಳೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ತುಂಬಿದ ಕೋಣೆಯಲ್ಲಿ ಹಾಸಿಗೆಯ ಮೇಲೆ ಒಬ್ಬ ಪುರುಷ ಮತ್ತು ಮಹಿಳೆ ಕುಳಿತಿರುವುದು ಕಂಡುಬಂದಿದೆ, ಅವರು ಪತ್ನಿ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾಗುತ್ತಿದೆ.ಸದ್ಯ ತನಗೆ ಮತ್ತು ತನ್ನ ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ್ದಾನೆ.ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ.






