ಕೃಷಿ
ಕುಂದಾಪುರ: ಹಾಲಾಡಿಯಲ್ಲಿ ಕಾಡುಪ್ರಾಣಿಗಳನ್ನು ಓಡಿಸಲು ಹೋದ ಕೃಷಿಕ ಕೆರೆಗೆ ಬಿದ್ದು ಸಾವು
Views: 44
ಕನ್ನಡ ಕರಾವಳಿ ಸುದ್ದಿ: ತೋಟದ ಕೃಷಿಯನ್ನು ಹಾಳು ಮಾಡಲು ಬಂದ ಕಾಡು ಪ್ರಾಣಿಗಳನ್ನು ಓಡಿಸಲು ಹೋಗುವಾಗ ಕಾಲುಜಾರಿ ಕೆರೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆಯು ಹಾಲಾಡಿ ಗ್ರಾಮದ ಮುದುವೇರಿ ಕೊಡ್ಲಿಮನೆ ಎಂಬಲ್ಲಿ ಸಂಭವಿಸಿದೆ.
ಕೃಷ್ಣ (44)ಮೃತಪಟ್ಟ ಕೃಷಿಕ
ಹಾಲಾಡಿ ಗ್ರಾಮದ ಮುದುವೇರಿ ಕೊಡ್ಲಿಮನೆ ಕೃಷ್ಣ ಅವರು ತಮ್ಮ ಜಾಗದಲ್ಲಿ ಅಡಿಕೆ ಹಾಗೂ ಭತ್ತವನ್ನು ಬೆಳೆದಿದ್ದರು. ಪ್ರತಿನಿತ್ಯ ಎಂಬಂತೆ ವಿವಿಧ ಜಾತಿಯ ಕಾಡುಪ್ರಾಣಿಗಳು ಕೃಷಿಯನ್ನು ಹಾಳು ಮಾಡಲು ದಾಳಿ ಇಡುತ್ತಿದ್ದವು. ಪ್ರತಿನಿತ್ಯವು ಗಮನಕ್ಕೆ ಬಂದಾಗಲೆಲ್ಲ ಅವುಗಳನ್ನು ಓಡಿಸುತ್ತಿದ್ದರು. ಹಾಗೆಯೇ ಅ.21ರಂದು ಕಾಡುಪ್ರಾಣಿ ಓಡಿಸಲು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟರು. ಪತ್ನಿ ದೇವಕಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






