ಸರಕಾರಿ ಪ್ರೌಢಶಾಲೆ ವಕ್ವಾಡಿ: ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ
Views: 5
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ರೋಟರಿ ಕ್ಲಬ್ ನ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಇಂಟರಾಕ್ಟ್ ಕ್ಲಬ್ ಅ.20ರಂದು ಉದ್ಘಾಟನೆ ನೆರವೇರಿತು.
ಎಚ್.ಎನ್ .ಲಮಾಣಿ ಹಿಂದಿ ಶಿಕ್ಷಕರು ಸಂಚಾಲಕರಾಗಿರುವ ಸದರಿ ಕ್ಲಬ್ಬಿನ ಅಧ್ಯಕ್ಷರಾಗಿ ಕುಮಾರಿ ಮಾನ್ವಿ ಮತ್ತು ಕಾರ್ಯದರ್ಶಿಯಾಗಿ ಕು॥ಪ್ರಣಮ್ ನಿಯುಕ್ತರಾದರು.
ರೋಟರಿ ಕ್ಲಬ್ ಕೋಟೇಶ್ವರ ಇದರ ಪದಾಧಿಕಾರಿಗಳು ಶ್ರೀಮತಿ ಅಕ್ಷತಾ ಗಿರೀಶ್ (ಅಧ್ಯಕ್ಷರು,) ಹಾಗೂ ಅರುಣ್ ದೇವಾಡಿಗ( ಕಾರ್ಯದರ್ಶಿ), ಆನಂದ ಆಚಾರ್ಯ( ವಲಯ ಸೇನಾನಿ ) ಜಯಕರ ಶೆಟ್ಟಿ ಪ್ರಭಾಕರ ಕುಂಭಾಶಿ ರೊಟೇರಿಯನ್ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ .ಎನ್ ಸ್ವಾಗತಿಸಿ, ರೋಟರಿ ಸಂಸ್ಥೆಯ ಕೊಡುಗೆಗಳನ್ನು ನೆನಪಿಸಿದರು.
ಕುಮಾರಿ ಮಾನ್ವಿಗೆ ಪದಕ ಪ್ರಧಾನ ಮಾಡುವುದರ ಮೂಲಕ ಇಂಟರಾಕ್ಟ್ ಕ್ಲಬ್ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಮತಿ ಅಕ್ಷತಾ ಗಿರೀಶ್ ರೋಟರಿ ಧ್ಯೇಯಗಳನ್ನು ತಿಳಿಸುತ್ತಾ ಇಂಟರಾಕ್ಟ್ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು. ಲಮಾಣಿ ಸರ್ ಅವರು ವಂದನಾರ್ಪಣೆಗೈದರು. ರೋ. ಪ್ರಭಾಕರ್ ಕುಂಭಾಶಿ ಇವರು ಕಾರ್ಯಕ್ರಮದ ನಿರ್ವಹಣೆಗೈದರು. ಎಲ್ಲ ವಿದ್ಯಾರ್ಥಿಗಳಿಗೂ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಯಿತು. ರೋಟರಿ ಕೋಟೇಶ್ವರ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಗಿರೀಶ್ ಐತಾಳ್,ಎಲ್ಲಾ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.








