ಇತರೆ

ಕಿರಿಮಂಜೇಶ್ವರ ರಾಷ್ಟೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್‌ನ ಚಕ್ರ ಕಳಚಿ ಬಿದ್ದು ವ್ಯಕ್ತಿಗೆ ಢಿಕ್ಕಿ

Views: 38

ಕನ್ನಡ ಕರಾವಳಿ ಸುದ್ದಿ: ಚಲಿಸುತ್ತಿದ್ದ ಟ್ಯಾಂಕರ್‌ನ ಚಕ್ರ ಕಳಚಿ ರಸ್ತೆ ಬದಿಯ ಕಟ್ಟೆಯಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ಬಡಿದ ಪರಿಣಾಮ ಅವರು ಗಾಯಗೊಂಡಿರುವ ಘಟನೆ ಕಿರಿಮಂಜೇಶ್ವರ ರಾ.ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಕಿರಿಮಂಜೇಶ್ವರ ಗ್ರಾಮದ ನಿವಾಸಿ ರಾಘವೇಂದ್ರ ಅವರು ಗಾಯಗೊಂಡವರು.

ರಾಘವೇಂದ್ರ ಅವರು ಕಿರಿಮಂಜೇಶ್ವರ ಗ್ರಾಮದ ರಾ.ಹೆದ್ದಾರಿ 66ರ ಶಾಲೆ ಬಾಗಿಲು ಬೀಚ್ ತಿರುವು ರಸ್ತೆಯ ಬಳಿಯಲ್ಲಿರುವ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಸಮಯದಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ನ ಹಿಂಬದಿಯ ಒಂದು ಚಕ್ರ ಕಳಚಿ ಟ್ಯಾಂಕರ್ ನಿಂದ ಬೇರ್ಪಟ್ಟು ಈ ಅಪಘಾತ ಸಂಭವಿಸಿದೆ.

ಗಾಯಾಳುವನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!