ಇತರೆ

ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಶೈನಿ ಅಸ್ಮಾ ಸಲ್ದಾನಾ

Views: 44

ಕನ್ನಡ ಕರಾವಳಿ ಸುದ್ದಿ:ಕಾರ್ಕಳದಕೌಡೂರು ರಂಗನಪಲೆಯ ಶೈನಿ ಅಸ್ಮಾ ಸಲ್ದಾನಾ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ಅಸ್ಮಾ ಸಲ್ದಾನಾ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ (ಸಿಪಿಎಲ್) ಪಡೆದುಕೊಂಡಿದ್ದಾರೆ. ಈಕೆ ಕೌಡೂರು ರಂಗನಪಲ್ಕೆಯ ನಿವಾಸಿ ಅಶೋಕ್‌ ಜಾಕೋಬ್ ಸಲ್ದಾನಾ ಮತ್ತು ಮರಿಯಾ ಗ್ರೆಟ್ನಾ ಸಲ್ದಾನಾ ದಂಪತಿಯ ಪುತ್ರಿ.

ಪ್ರಾಥಮಿಕ ಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಶೈನಿ ಅವರು ಕಾರ್ಕಳದ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದರು. ಬಾಲ್ಯದಿಂದಲೂ ವಿಮಾನಯಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶೈನಿ ತನ್ನ ಗುರಿಯನ್ನು ತಲುಪಲು ಕಠಿನ ಹಾದಿ ಆಯ್ಕೆ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ.

ಪೈಲಟ್ ನನಸು ಮಾಡಿಕೊಳ್ಳಲು ಶೈನಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿ ಪ್ರವೇಶ ಪರೀಕ್ಷೆಯನ್ನು ಬರೆದು ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ನಂತರ 2023ರ ಆಗಸ್ಟ್ ನಿಂದ ಉತ್ತರಪ್ರದೇಶದ ಫುರ್ಸತ್ ಗಂಜ್ ನಲ್ಲಿರುವ ಪ್ರತಿಷ್ಠಿತ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಕಠಿನ ವೃತ್ತಿಪರ ಪೈಲಟ್ ತರಬೇತಿ ಪಡೆದಿದ್ದರು.

Related Articles

Back to top button
error: Content is protected !!