ಕ್ರೀಡೆ

ಕರಾಟೆ ಸ್ಪರ್ಧೆಯಲ್ಲಿ ಉಡುಪಿಯ ಸಾನ್ವಿ ಎಸ್ ಅಂಚನ್ ರಾಜ್ಯ ಮಟ್ಟಕ್ಕೆ ಆಯ್ಕೆ

Views: 14

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಿಪಿಸಿ ಕಾಲೇಜು ಉಡುಪಿಯ ಸಾನ್ವಿ ಎಸ್ ಅಂಚನ್ ಅತ್ಯುತ್ತಮ ಸಾಧನೆ ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವಳು‌ ಶ್ರೀ ಸಂದೀಪ್ ಕುಮಾರ್ ಪಾರ್ಮಸಿಸ್ಟ್ ಅಧಿಕಾರಿ ಜಿಲ್ಲಾಸ್ಪತ್ರೆ ಉಡುಪಿ ಮತ್ತು ಶ್ರೀಮತಿ‌ ಅಶ್ವಿನಿ‌ ದೈಹಿಕ ಶಿಕ್ಷಣ‌ ಶಿಕ್ಷಕಿ ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ ಇವರ ಪುತ್ರಿ. ರವಿ ಸಾಲಿಯಾನ್ ರವರ‌ ಶಿಷ್ಯೆ.

ಸಾಧನೆಗೈದ ಸಾನ್ವಿ ಎಸ್ ಅಂಚನ್ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

 

Related Articles

Back to top button
error: Content is protected !!