ಇತರೆ

ಟ್ಯಾಂಕರ್-ಆಟೋ ರಿಕ್ಷಾ ಅಪಘಾತ: ಬೀದರ್‌ನ 7 ಮಂದಿ ಸಾವು

Views: 43

ಕನ್ನಡ ಕರಾವಳಿ ಸುದ್ದಿ: ಹೈದರಾಬಾದ್ ಮಂಡಲ್‌ನ ಸತ್ವಾರ್ ಎಂಬಲ್ಲಿ ಮಂಗಳವಾರ ಸಂಜೆ ಟ್ಯಾಂಕ‌ರ್ ಮತ್ತು ಆಟೋ ರಿಕ್ಷಾ ಅಪಘಾ ತಕ್ಕೀಡಾಗಿದ್ದು, ಬೀದರ್‌ನ ಏಳು ಮಂದಿ ಕೃಷಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತರನ್ನು ರೇಖಾ, ಕವಿತಾ, ರೇಷ್ಮಾ, ಆಟೋ ಚಾಲಕ ದೇವದಾಸ್ ಎಂದು ಗುರುತಿಸಲಾಗಿದೆ ಇನ್ನು ಇಬ್ಬರ ಹೆಸರು ಪತ್ತೆ ಆಗಿಲ್ಲ. ನಿರ್ಮಲಾ, ನಿಕಿತಾ, ತುಳಸಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಮತ್ತು ಶೋಭಾ ಎಂಬವರು ಗಾಯಗೊಂಡಿದ್ದು, ಜಹೀರಾಬಾದ್‌ನ ಏರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿ ಎಂದು ವರದಿಗಳು ಸೂಚಿಸಿವೆ.

ಮೃತರು ಬೀದರ್‌ನ ರಾಜ್‌ ಗಿರಿಯ ಕೃಷಿ ಕಾರ್ಮಿಕರಾಗಿದ್ದರು. ಕೃಷಿ ಕೆಲಸ ಮುಗಿಸಿ ಕೊಂಡು ವಾಪಸ್ ಬರುತ್ತಿರುವಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆಟೋ ರಿಕ್ಷಾದಲ್ಲಿ ಚಾಲಕ ಸೇರಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ 11 ಮಂದಿ ಮಹಿಳಾ ಕಾರ್ಮಿಕರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯರು ಹೇಳುವ ಪ್ರಕಾರ, ಇವರೆಲ್ಲರೂ ಪ್ರತಿದಿನ ಕೂಲಿ ಕೆಲಸಕ್ಕಾಗಿ ಜಹೀರಾಬಾದ್‌ಗೆ ತೆರಳುತ್ತಿದ್ದರು. ಮುನಿಪಲ್ಲಿ ಮಂಡಲದ ಬುದೇರಾದಲ್ಲಿ ಹತ್ತಿ ಕಳೆಯ ತೆಗೆಯುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

 

Related Articles

Back to top button
error: Content is protected !!