ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ: ಸೇವಾ ಸಮಿತಿ ದಶಮಾನೋತ್ಸವ,ಆಟಿಡೊಂಜಿ ದಿನ ಕಾರ್ಯಕ್ರಮ
Views: 83
ಕನ್ನಡ ಕರಾವಳಿ ಸುದ್ದಿ: ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ದಶಮಾನೋತ್ಸವ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮ ಆಗಸ್ಟ್ 9 ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಸ್.ಸುರೇಶ್ ಶೆಟ್ಟಿಗಾರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ, ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯವರು ನಿರಂತರವಾಗಿ ಸೇವಾ ಕೈಂಕರ್ಯ,ಉತ್ತಮ ಸಮಾಜ ಸೇವೆಗಳು ಉತ್ತರೋತ್ತರ ಕೊಡುಗೆಗಳು ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್. ರಾಘವ ಶೆಟ್ಟಿಗಾರ್ ಸಾಲಿಕೇರಿ ಅವರು ಮಾತನಾಡಿ, ಸರಿಸುಮಾರು 55 ವರ್ಷಗಳಿಂದ ಸೇವಾ ಕಾರ್ಯ ಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಸಾಧಕ ವಿದ್ಯಾರ್ಥಿಗಳಿಗೆ ಅಶಕ್ತರಿಗೆ, ವೈದ್ಯಕೀಯ ನೆರವು ಮತ್ತು ಕೊರೋನ ಸಂದರ್ಭದಲ್ಲಿ ಸಮಾಜದವರಿಗೆ ವಿಶೇಷವಾಗಿ ಸ್ಪಂದಿಸಿದ್ದೇವೆ. ಮುಂದೆಯೂ ಇಂತಹ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಿಮ್ಮೆಲ್ಲರ ಸಹಕಾರದೊಂದಿಗೆ ನಿರಂತರವಾಗಿ ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಇವರು ಮಾತನಾಡುತ್ತಾ, ಸಾಲಿಕೇರಿಗೂ ನನಗೂ ಬಹಳ ಹತ್ತಿರದ ಸಂಬಂಧವಿದೆ, ಉಭಯ ಜಿಲ್ಲಾ ಸಂಘಗಳ ಪದಾಧಿಕಾರಿಗಳಲ್ಲಿ ಸಾಲಿಕೇರಿಯವರೇ ಬಹಳಷ್ಟಿದ್ದಾರೆ. ಸಾಲಿಕೇರಿ ಸೇವಾ ಸಮಿತಿ 10ವರ್ಷಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿರುತ್ತದೆ ಎಂದು ಶ್ಲಾಘಿಸಿದರು.
ಶ್ರೀಮತಿ ಕೀರ್ತಿ ಕುಮಾರಿ ಕೇಂದ್ರ ಸ್ಥಾನ ಸಹಾಯಕರು ಶಿವಮೊಗ್ಗ ಇವರು ಮಾತನಾಡಿ, ಸೇವಾ ಸಮಿತಿಯ ಕಾರ್ಯ ವೈಖರಿಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ್ ವಿ.ಎಸ್ ಮತ್ತು ಶ್ರೀ ಜಗದೀಶ ಶೆಟ್ಟಿಗಾರ್, ಶ್ರೀಮತಿ ಹೇಮಲತಾ ರಘು ಶೆಟ್ಟಿಗಾರ್-ಗೌರವ ಸಲಹೆಗಾರರು. ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ ಮಟಪಾಡಿ, ಶ್ರೀಮತಿ ಗೀತಾ ಚಂದ್ರಶೇಖರ್ ಸಾಲಿಕೇರಿ- ಉಪಾಧ್ಯಕ್ಷರು.ಶ್ರೀ ರಜನಿಕಾಂತ್ ಶೆಟ್ಟಿಗಾರ್ ಸಾಲಿಕೇರಿ- ಪ್ರಧಾನ ಕಾರ್ಯದರ್ಶಿ,ಶ್ರೀ ಅಶೋಕ್ ಶೆಟ್ಟಿಗಾರ್ ಬೈಕಾಡಿ- ಕೋಶಾಧಿಕಾರಿ. ಶ್ರೀ ಪ್ರಭಾಕರ ಶೆಟ್ಟಿಗಾರ್ ಕೆರೆಬದಿ- ಜತೆ ಕಾರ್ಯದರ್ಶಿ.ಶ್ರೀಮತಿ ಶೈಲಜಾ ಸುಧಾಕರ್ ಶೆಟ್ಟಿಗಾರ್- ಜತೆ ಕಾರ್ಯದರ್ಶಿ ಉಪಸ್ಥಿತರಿದ್ದರು.
ಶ್ರೀ ಸುರೇಶ್ ಶೆಟ್ಟಿಗಾರ್ ಹಂದಾಡಿ ಸಮಾಜ ಸೇವಕರು, ಕುಮಾರಿ ನವ್ಯಶ್ರೀ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿ (ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕೃತರು) ಇವರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡೆಯಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.
ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಮಿತಿಯ ಮಹಿಳಾ ಸದಸ್ಯೆಯರಿಂದ ತಯಾರಿಸಲ್ಪಟ್ಟ ಆಷಾಢ ಮಾಸದ ತರಹೇವಾರಿ ಖಾದ್ಯಗಳ ರಸದೌತಣ ನಡೆಯಿತು.
ಕು. ಸಮೀಕ್ಷಾ, ದೀಕ್ಷಾ ಪ್ರಾರ್ಥಿಸಿದರು. ಸೇವಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಗೀತಾ ಚಂದ್ರಶೇಖರ್ ಸ್ವಾಗತಿಸಿದರು. ಸಮಿತಿಯ ಗೌರವ ಸಲಹೆಗಾರ ಶ್ರೀ ಜಗದೀಶ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಜಿನಿಕಾಂತ್ ಶೆಟ್ಟಿಗಾರ್ ಶ್ರೀ ಅಶೋಕ್ ಶೆಟ್ಟಿಗಾರ್ ಆಯವ್ಯಯ ಮಂಡಿಸಿದರು. ಶೋಭಾ ಸುಧಾಕರ್ ಕಿರು ಪರಿಚಯ ಮಾಡಿದರು. ಶೈಲಜಾ ಸುಧಾಕರ್ ವಂದಿಸಿದರು. ಸುಧಾಕರ ಶೆಟ್ಟಿಗಾರ್ ರಾಜೇಶ್ ಶೆಟ್ಟಿಗಾರ್ ಮಟ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಮಾಲತಿ ಶಿವರಾಜ್ ಶೆಟ್ಟಿಗಾರ್ ಕ್ರೀಡಾ ಸಾಧಕರ ಪಟ್ಟಿ ವಾಚಿಸಿದರು.
ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.








