ಸಾಂಸ್ಕೃತಿಕ

‘ಸ್ಪಿರಿಟ್ ಆಫ್ ಯೂಥ್’ ಡ್ಯಾನ್ಸ್ ಮತ್ತು ‘ಮ್ಯೂಸಿಕ್ ಫೆಸ್ಟಿವಲ್ ಗೆ’ ಯುಕ್ತಿ ಉಡುಪ ಬಳ್ಕೂರು ಆಯ್ಕೆಯಾಗಿ ಭರತನಾಟ್ಯ ಪ್ರದರ್ಶನ

Views: 21

ಕನ್ನಡ ಕರಾವಳಿ ಸುದ್ದಿ: ಮ್ಯೂಸಿಕ್ ಅಕಾಡೆಮಿ ಮೆಡ್ರಾಸ್ (ಚೆನ್ನೈ) ಇವರು ಆಯೋಜಿಸಿದ 2026ರ “ಸ್ಪಿರಿಟ್ ಆಫ್ ಯೂಥ್’ ಡ್ಯಾನ್ಸ್ ಮತ್ತು ಮ್ಯೂಸಿಕ್ ಫೆಸ್ಟಿವಲ್ ಗೆ ಯುಕ್ತಿ ಉಡುಪ ಬಳ್ಕೂರು ಆಯ್ಕೆಯಾಗಿ ಉತ್ತಮ ಭರತನಾಟ್ಯ ಪ್ರದರ್ಶನ ನೀಡಿರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ 10 ಜನ ಭರತನಾಟ್ಯ ಕಲಾವಿದರು ಆಯ್ಕೆಯಾಗಿ ಭರತನಾಟ್ಯ ಪ್ರದರ್ಶನ ನೀಡಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕಲಾವಿದೆಯಾಗಿದ್ದಾಳೆ. ಆಗಸ್ಟ್ 4 ರ ಸಂಜೆ 7.30 ರಿಂದ 9ರ ವರೆಗೆ ಮ್ಯೂಸಿಕ್ ಅಕಾಡೆಮಿ ಮೆಡ್ರಾಸ್ ನ ಕಸ್ತೂರಿ ಶ್ರೀನಿವಾಸನ್ ಹಾಲ್ ನಲ್ಲಿ ಈ ಕಾರ್ಯಕ್ರಮ ನಡೆಯಿತು.

ನಟುವಾಂಗ ಹಾಗೂ ನೃತ್ಯ ಸಂಯೋಜನೆಯಲ್ಲಿ ಗುರು ವಿದುಷಿ ಪ್ರವಿತ ಅಶೋಕ್‌,ಹಾಡುಗಾರಿಕೆಯಲ್ಲಿ ವಿನೀತ್ ಪುರುವಂಕರ್, ಮೃದಂಗದಲ್ಲಿ ವಿದ್ಯಾಶಂಕ‌ರ್ N,ವೀಣೆಯಲ್ಲಿ N ಅನಂತನಾರಾಯಣನ್, ಹಾಗೂ ವಯೊಲಿನ್ ನಲ್ಲಿ T V ಸುಕನ್ಯರವರು ಸಹಕರಿಸಿದರು.

ಯುಕ್ತಿ ಉಡುಪ ಬಳ್ಕೂರು ಇವರು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತ ಅಶೋಕ್ ಅವರ ಶಿಷ್ಠೆಯಾಗಿದ್ದು ಕಳೆದ 13 ವರ್ಷದಿಂದ ಭರತನಾಟ್ಯ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದು,ಈಗಾಗಲೇ ದೇಶದ ಹಲವಾರು ಕಡೆ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯದಲ್ಲಿ ಪಾಲ್ಗೊಂಡು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನ ಬಿರುದುಗಳನ್ನು ಪಡೆದುಕೊಂಡಿರುತ್ತಾಳೆ .

ಈಕೆ ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ಇವರ ಪುತ್ರಿಯಾಗಿರುತ್ತಾಳೆ.

Related Articles

Back to top button
error: Content is protected !!