ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ನಲ್ಲಿ “ಫ್ರೂಟ್ಸ್ ಡೇ”ಮತ್ತು “ಟ್ರೆಡಿಷನಲ್ ಡೇ”
Views: 11
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ನಲ್ಲಿ ಫ್ರೂಟ್ಸ್ ಡೇ ಮತ್ತು ಟ್ರೆಡಿಷನಲ್ ಡೇ ಕಾರ್ಯಕ್ರಮ ಅ.7ರಂದು ನಡೆಯಿತು.
ಈ ಸಂದರ್ಭದಲ್ಲಿ ಮಕ್ಕಳು ವಿವಿಧ ಬಗೆಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಹಾಗೂ ತಮ್ಮೊಂದಿಗೆ ಹಣ್ಣುಗಳನ್ನು ತೆಗೆದುಕೊಂಡು ಬಂದಿದ್ದರು ಮಕ್ಕಳು ತೆಗೆದುಕೊಂಡು ಬಂದ ಹಣ್ಣುಗಳನ್ನು ಹಾಗೂ ಹಣ್ಣಿನ ಕ್ರಾಫ್ಟ್ ಗಳನ್ನು ಅಲಂಕರಿಸಲಾಯಿತು.ನಂತರ ಮಕ್ಕಳು ತಾವು ತಂದಿರುವ ಹಣ್ಣುಗಳ ಬಗ್ಗೆ ಒಂದೆರಡು ಮಾತನಾಡಿದರು. ಹಣ್ಣುಗಳ ಕುರಿತಾದ ಹಾಡಿನೊಂದಿಗೆ ನರ್ತಿಸಿದರು. ನಂತರ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಇವರು ಹಣ್ಣುಗಳ ಬಣ್ಣ ರುಚಿ ಹಾಗೂ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ತದನಂತರ ವಿವಿಧ ಹಣ್ಣುಗಳ ಕ್ರಾಫ್ಟ ಅನ್ನು ಧರಿಸಿ ಮಕ್ಕಳು ರ‍್ಯಾoಪ್ ವಾಕ್ ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಫ್ರೂಟ್ ಸಲಾಡ್ ಅನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀಮತಿ ಸುಜಾತಾ ಆಚಾರ್ ಸ್ವಾಗತಿಸಿ, ಶ್ರೀಮತಿ ರಜನಿ ಅಶೋಕ್ ನಿರೂಪಿಸಿದರು. ಹಾಗೂ ವೈಶಾಲಿ ಶೆಟ್ಟಿ ವಂದಿಸಿದರು.






