ಮಹಿಳೆಯರಿಗಾಗಿ LICಯಿಂದ ಬಿಮಾ ಸಖಿ ಯೋಜನೆ; ಹೂಡಿಕೆ ಇಲ್ಲದೆಯೇ ವೃತ್ತಿ ಜೀವನ ಆರಂಭಿಸಲು ಪ್ರಮುಖ ಹೆಜ್ಜೆ!
Views: 38
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರವ್ಯಾಪಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಮಹಾ ಉದ್ದೇಶದಿಂದ ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರಿಗಾಗಿಯೇ ಬಿಮಾ ಸಖಿ ಯೋಜನೆ (Bima Sakhi Yojane) ಯನ್ನು ಪರಿಚಯಿಸಿದೆ.
ಈ ಮಹತ್ವದ ಯೋಜನೆಯು ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗದ ಭರವಸೆಯ ಜೊತೆಗೆ ಮಾಸಿಕ ಆದಾಯವನ್ನೂ ಸಹ ಖಚಿತಪಡಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಬಿಮಾ ಸಖಿ ಯೋಜಮೆ ಎಂದರೇನು? ಬಿಮಾ ಸಖಿ ಯೋಜನೆಯ ಪ್ರಯೋಜನವೇನು? ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಪ್ರಮುಖ ಮಾಹಿತಿ ಇಲ್ಲಿದೆ.
ಬಿಮಾ ಸಖಿ ಯೋಜನೆ ಎಂದರೆ ಏನು?
ಎಲ್‌ಐಸಿ ಮಹಿಳಾ ಕೇಂದ್ರಿಯವಾಗಿ ಪರಿಚಯಿಸಿರುವ ಹೊಸ ಉಪಕ್ರಮವೇ ಬಿಮಾ ಸಖಿ ಯೋಜನೆ. ಬಿಮಾ ಸಖಿ ಯೋಜನೆಯು ಅರ್ಹ ಮಹಿಳೆಯರಿಗೆ ವಿಮಾ ಸಲಹೆಗಾರರಾಗಿ ಉದ್ಯೋಗ ಆರಂಭಿಸಲು ಅಗತ್ಯ ತರಬೇತಿಯನ್ನು ನೀಡುತ್ತದೆ. ಬಿಮಾ ಸಖಿ ಯೋಜನೆ ಕೇವಲ ಉದ್ಯೋಗ ಉಪಕ್ರಮವಲ್ಲ. ವೃತ್ತಿಪರ ಅವಕಾಶ, ಆರ್ಥಿಕ ಜ್ಞಾನ, ಆದಾಯ ಗಳಿಸುವ ಕೌಶಲ್ಯದೊಂದಿಗೆ ಮಹಿಳಾ ಸಬಲೀಕರಣಕ್ಕೆ ಒಂದು ಪ್ರಮುಖ ಹೆಜ್ಜೆ ಆಗಿದೆ.
ಹೂಡಿಕೆ ಇಲ್ಲದೆಯೇ ವೃತ್ತಿ ಜೀವನ ಆರಂಭಿಸಲು ಸಹಕಾರಿ:
ಎಲ್‌ಐಸಿಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಬಿಮಾ ಸಖಿ ಯೋಜನೆಯಡಿ ಎಲ್‌ಐಸಿ ವೃತ್ತಿಪರರಿಂದ ಮಾರ್ಗದರ್ಶನವನ್ನೂ ಸಹ ನೀಡಲಾಗುತ್ತದೆ. ಇದು ವಿಮಾ ಉತ್ಪನ್ನಗಳು ಮತ್ತು ಹಣಕಾಸು ಯೋಜನಾ ಸೇವೆಗಳನ್ನು ಉತ್ತೇಜಿಸಲು ಬೇಕಿರುವ ಕೌಶಲ್ಯಗಳನ್ನು ನೀಡಲಾಗುತ್ತದೆ. ಹಾಗಾಗಿ, ಯಾವುದೇ ರೀತಿಯ ಹಣದ ಹೂಡಿಕೆ ಮಾಡಲು ಬಯಸದೆಯೇ ವೃತ್ತಿ ಬದುಕನ್ನು ಆರಂಭಿಸಲು ಬಯಸುವ ಮಹಿಳೆಯರಿಗೆ ಇದು ವಿಶೇಷ ಉಪಕ್ರಮವಾಗಿದೆ.
ಬಿಮಾ ಸಖಿ ಯೋಜನೆಯಡಿ ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ?
ಬಿಮಾ ಸಖಿ ಯೋಜನೆಯಡಿ ಸೇರಲು ಆಸಕ್ತಿ ಹೊಂದಿರುವ ಮಹಿಳೆಯರು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ..
* ಭಾರತೀಯ ನಾಗರೀಕರಾಗಿರಬೇಕು.
* ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು
* ಎಲ್‌ಐಸಿ ನಿಗದಿಪಡಿಸಿರುವ ಮೂಲ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
* ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
* ವಿಮಾ ಜಾಗೃತಿಯಲ್ಲಿ ಆಸಕ್ತಿ ಹೊಂದಿರಬೇಕಾಗುತ್ತದೆ.
ಬಿಮಾ ಸಖಿ ಯೋಜನೆ: ಸ್ತ್ರೀಯರಿಗೆ ಸಿಗಲಿದೆ ಶಕ್ತಿ, ಮಾಸಿಕ ಆದಾಯ ಗ್ಯಾರಂಟಿ: ಬಿಮಾ ಸಖಿ ಯೋಜನೆಯ ಬಹಳ ದೊಡ್ಡ ಪ್ರಯೋಜನವೆಂದರೆ ಇದು ಮಹಿಳೆಯರಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಲು, ಕೌಶಲ್ಯವನ್ನು ಕಲಿಯುತ್ತಲೇ ಆದಾಯ ಗಳಿಸಲು ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ, ದೀರ್ಘಾವಧಿಯ ಆದಾಯದ ಮೂಲವನ್ನು ಸೃಷ್ಟಿಸಲು ಕೂಡ ಇದು ಸಹಕಾರಿ ಆಗಿದೆ.
ಸರಳವಾಗಿ ಹೇಳುವುದಾದರೆ ಬಿಮಾ ಸಖಿ ಯೋಜನೆಯು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸ್ವಾತಂತ್ರ್ಯ, ಕುಟುಂಬ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಕೆಲಸ ನಿರ್ವಹಿಸುವ ವೃತ್ತಿ ಆಯ್ಕೆ, ದೀರ್ಘಾವಧಿಯ ಆದಾಯದ ಮೂಲದಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ.
ಬಿಮಾ ಸಖಿ ಯೋಜನೆಗೆ ಅರ್ಜಿ ಪ್ರಕ್ರಿಯೆ ಹೇಗಿರುತ್ತೆ?
ಬಿಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು..
* ಮೊದಲಿಗೆ ನಿಮ್ಮ ಮನೆಯ ಹತ್ತಿರವಿರುವ ಎಲ್‌ಐಸಿ ಕಚೇರಿಗೆ ಭೇಟಿ ನೀಡಿ ಬಿಮಾ ಸಖಿ ಯೋಜನೆಯ ವಿವರಗಳನ್ನು ಪಡೆಯಲು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ.
* ಬಳಿಕ ಅವರಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
* ಅರ್ಜಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್‌ಐಸಿಯ ಅಧಿಕಾರಿಗಳ ಮಾರ್ಗದರ್ಶನದಂತೆ ತರಬೇತಿ ಕ್ಲಾಸ್‌ಗಳಿಗೆ ಹಾಜರಾಗಿ.
* ಕೌಶಲ್ಯ ತರಬೇತಿ ಬಳಿಕ ನಿಮಗೆ ಇಷ್ಟವಿದ್ದರೆ ಬಿಮಾ ಸಖಿಯಾಗಿ ಕೆಲಸ ಆರಂಭಿಸಲು ಅವಕಾಶವಿರುತ್ತದೆ.






