ಶಿಕ್ಷಣ

ಕುಂದಾಪುರ: ಪದವಿ ಕಾಲೇಜಿನ ವಿದ್ಯಾರ್ಥಿನಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ 

Views: 409

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಬಿ.ಬಿ. ಹೆಗ್ಡೆ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

ಬಟ್ಟೆ ಜೋಡಿಸುವ ವಿಚಾರವಾಗಿ ಸಹೋದರಿಯೊಂದಿಗೆ ಗಲಾಟೆ ಮಾಡಿಕೊಂಡು, ತಾಯಿ ಬೈದರೆಂಬ ಕಾರಣಕ್ಕೆ ಸಿಟ್ಟಾದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಳ್ಳಾಲ ಗ್ರಾಮದ ಗಂಗಮಾತಾ ನಿವಾಸಿ ಚಂದ್ರಾವತಿ ಹಾಗೂ ಪ್ರಭಾಕರ ನಾಯಕ್ ದಂಪತಿಯ 18 ವರ್ಷದ ಪುತ್ರಿ ಪ್ರಮಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಅಗಸ್ಟ್ 6ರಂದು ಬೆಳಗ್ಗಿನ ಜಾವ ರೂಮಿನಲ್ಲಿ ಬಟ್ಟೆಗಳನ್ನು ಇಡುವ ವಿಚಾರವಾಗಿ ಪ್ರಮಿತಾ ಮತ್ತು ಆಕೆಯ ತಂಗಿಯ ನಡುವೆ ಮಾತುಕತೆ ನಡೆದು ಗಲಾಟೆಯಾಗಿತ್ತು. ಇದನ್ನು ಗಮನಿಸಿದ ತಾಯಿ ಚಂದ್ರಾವತಿ ಇಬ್ಬರಿಗೂ ಬೈದು ಗಲಾಟೆಯನ್ನು ಬಿಡಿಸಿದ್ದರು. ಇದರಿಂದ ಕೋಪಗೊಂಡ ಸಿಡುಕು ಸ್ವಭಾವದ ಪ್ರಮಿತಾ, ಕೊಠಡಿಗೆ ತೆರಳಿ ಒಳಗಿನಿಂದ ಬಾಗಿಲ ಚಿಲಕ ಹಾಕಿಕೊಂಡಿದ್ದಳು.

ತಾಯಿ ಕೆಲಸಕ್ಕೆ ತೆರಳಿದ ಬಳಿಕ, ಬೆಳಿಗ್ಗೆ 8:30ರ ಸುಮಾರಿಗೆ ಪ್ರಮಿತಾಳ ಸಹೋದರ ತಾಯಿಗೆ ಕರೆ ಮಾಡಿ, “ಅಕ್ಕ ಬಾಗಿಲು ತೆಗೆಯುತ್ತಿಲ್ಲ ಮತ್ತು ಮಾತನಾಡುತ್ತಿಲ್ಲ” ಎಂದು ತಿಳಿಸಿದ್ದಾನೆ. ಗಾಬರಿಗೊಂಡ ತಾಯಿ ಕೂಡಲೇ ಸಂಬಂಧಿ ವಿಘ್ನೇಶ್ ಎಂಬುವರಿಗೆ ಕರೆ ಮಾಡಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!