ಸಾಂಸ್ಕೃತಿಕ
ಸುಂಕದಕಟ್ಟೆ ಯಕ್ಷಗಾನ ಮೇಳದ ಕಲಾವಿದ ನೇಣು ಬಿಗಿದು ಆತ್ಮಹತ್ಯೆ
Views: 49
ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ಕಲಾವಿದ, ಸಾರಣೆ ಮೇಸ್ತ್ರಿ ಕೆಲಸ ಮಾಡುವ ಕಿದೂರು ದಂಡೆಗೋಳಿ ಮಂಜಲ್ಪಡ್ಡು ನಿವಾಸಿ ಜಯೇಂದ್ರ ಕೆ. (54) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಅವರು ನೇಣು ಬಿಗಿದುಕೊಂಡಿದ್ದಾರೆ. ಮನೆ ಮಂದಿ ಸಂಜೆ ಮನೆಗೆ ಬಂದಾಗ ಹಗ್ಗ ತುಂಡಾಗಿ ಕೊಠಡಿಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದರು. ಬಳಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದರೂ ಆ ವೇಳೆಗೆ ಸಾವು ಸಂಭವಿಸಿತ್ತು.
ಸುಂಕದಕಟ್ಟೆ ಮೇಳದಲ್ಲಿ ಆರು ವರ್ಷದಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.






