ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಭೇರಿ
ಮೂರು ಚಿನ್ನದ ಪದಕಗಳೊಂದಿಗೆ ಜಿಲ್ಲಾ ಮಟ್ಟಕ್ಕೆ ಅರ್ಹತೆ – ಎರಡು ಬೆಳ್ಳಿಯ ಪದಕಗಳೊಂದಿಗೆ ಒಟ್ಟು ಐವರು ವಿದ್ಯಾರ್ಥಿಗಳ ಅಮೋಘ ಸಾಧನೆ
Views: 0
ಕನ್ನಡ ಕರಾವಳಿ ಸುದ್ದಿ: ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
9ನೇ ತರಗತಿಯ ಕಾಜಿ ಮೊಹಮ್ಮದ್ ನೌಮಾನ್, 10ನೇ ತರಗತಿಯ ಸಾನಿಯಾ ಹಾಗೂ 7ನೇ ತರಗತಿಯ ಸಾನಿಧ್ಯ ಅವರು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 9ನೇ ತರಗತಿಯ ಮೊಹಮ್ಮದ್ ನಿಜಾಫ್ ಹಾಗೂ 8ನೇ ತರಗತಿಯ ಮದೀಹಾ ಹೀನಾ ಅವರು ಬೆಳ್ಳಿಯ ಪದಕಗಳನ್ನು ಪಡೆದು ಶಾಲೆಯ ಸಾಧನೆಗೆ ಮತ್ತೊಂದು ಗರಿ ತಂದಿದ್ದಾರೆ.
ಮೂರು ಚಿನ್ನದ ಪದಕಗಳು ಹಾಗೂ ಎರಡು ಬೆಳ್ಳಿಯ ಪದಕಗಳೊಂದಿಗೆ ಒಟ್ಟು ಐವರು ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನೇರಿ, ತಮ್ಮ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೆ ಈ ವಿಜಯದ ಮೂಲಕ ಅರ್ಥಪೂರ್ಣ ಮನ್ನಣೆ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಹೃತ್ಪೂರ್ವಕವಾಗಿ ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸಿ ಶಾಲೆಗೆ ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದರು.






