ಇತರೆ

ಅಪ್ಪ ಫ್ಯಾನ್‌ಗೆ ನೇಣು ಹಾಕಿಕೊಳ್ಳುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ 7ವರ್ಷದ ಮಗ!

Views: 117

ಕನ್ನಡ ಕರಾವಳಿ ಸುದ್ದಿ: ದೆಹಲಿ ಸಮೀಪದ ಗುರುಗಾಂವ್‌ನ ಸೂರತ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ವರದಿ ಯಾಗಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿರುವ 36 ವರ್ಷದ ಸಂಜೀವ್ ಯಾದವ್ ಕೌಟುಂಬಿಕ ಕಲಹದ ಕಾರಣ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭ ಮನೆಯಲ್ಲಿ ಪತ್ನಿ ಮನ್‌ಪ್ರೀತ್ ಕೌರ್ ಮತ್ತು 7 ವರ್ಷದ ಮಗ ಕೂಡಾ ಇದ್ದರು. ಪತಿ ಬೇಸರಗೊಂಡು ನೇಣು ಹಾಕಿಕೊಳ್ಳಲು ಮುಂದಾದಾಗ ಪತ್ನಿ ಮನ್‌ಪ್ರೀತ್ ಕೌರ್ ನೆರೆಹೊರೆಯ ವರಿಂದ ಸಹಾಯ ಕೋರಿ ಜೋರಾಗಿ ಕೂಗಿ ಕೊಂಡಿದ್ದಾರೆ. ಅಷ್ಟರಲ್ಲಾಗಲೇ ಪತಿ ಸಂಜೀವ್ ನೇಣು ಬಿಗಿದುಕೊಂಡಿದ್ದಾರೆ.

ಆ ಸಂದರ್ಭ ನೆರೆಮನೆಯವರು ಸಹಾಯಕ್ಕೆ ಧಾವಿಸಿ ಬಂದಾಗ ಅವರಿಗೆ ಅಲ್ಲಿನ ದೃಶ್ಯ ಆಘಾತ ಉಂಟು ಮಾಡಿದೆ. ಸಂಜೀವ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದರೆ, ಅವರ 7 ವರ್ಷದ ಮಗ ಮೊಬೈಲ್ ಕ್ಯಾಮೆರಾದಲ್ಲಿ ಅಪ್ಪ ನೇಣು ಹಾಕಿಕೊಳ್ಳುವುದನ್ನು ಚಿತ್ರೀಕರಿಸುತ್ತಿದ್ದ. ಈ ದೃಶ್ಯ ನೋಡಿದ ನೆರೆಮನೆಯವರು ಆಘಾತಗೊಂಡು ಸಂಜೀವ್ ಅವರನ್ನು ಕಾಪಾಡುವುದನ್ನು ಕ್ಷಣ ಮರೆತೇಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಸಂಜೀವ ಪ್ರಾಣಪಕ್ಷಿ ಹಾರಿಹೋಗಿದೆ.

ಘಟನೆ ಬಗ್ಗೆ ಸ್ಥಳೀಯರು ವಿವರಿಸಿದಾಗ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಅದರಲ್ಲಿ ಸಂಜೀವ್ ನೇಣಿಗೆ ಮುಂದಾದ ಸಂದರ್ಭದ ದೃಶ್ಯಗಳು ರೆಕಾರ್ಡ್ ಅಗಿರುವುದು ಕಂಡಿದ್ದು, ಪೊಲೀಸರು ಕೂಡಾ ಆಘಾತಕ್ಕೊಳಗಾದರು ಎಂದು ವರದಿಯಾಗಿದೆ.

Related Articles

Back to top button
error: Content is protected !!