ಇತರೆ

ಕುಂದಾಪುರ:ಬೀಜಾಡಿಯಲ್ಲಿ ನೀರಿನ ಟ್ಯಾಂಕಿಯ ಕಬ್ಬಿಣದ ಸ್ಟ್ಯಾಂಡ್‌ಗೆ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ

Views: 84

ಕನ್ನಡ ಕರಾವಳಿ ಸುದ್ದಿ: ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಕೋಟೇಶ್ವರ ಗ್ರಾಮದ ಬೀಜಾಡಿ ತ್ರಿಮೂರ್ತಿ ಸರ್ಕಲ್ ಸಮೀಪದ ನಿವಾಸಿ ಸುರೇಶ್ ರಾಮುಗೌಳಿ (30) ಎಂದು ಗುರುತಿಸಲಾಗಿದೆ. ಅವರು ಗಾರೆ ಕೆಲಸ ಮಾಡುತ್ತಿದ್ದು, ಮದ್ಯಪಾನದ ವ್ಯಸನ ಮತ್ತು ಫಿಟ್ಸ್‌ (ಮೂರ್ಛೆ) ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜುಲೈ 31ರಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಮನೆಯ ಹೊರಗೆ ಕುಳಿತಿದ್ದ ಅವರು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.15ರ ಅವಧಿಯಲ್ಲಿ ಮನೆಯ ಹಿಂಭಾಗದ ನೀರಿನ ಟ್ಯಾಂಕಿಯ ಕಬ್ಬಿಣದ ಸ್ಟ್ಯಾಂಡ್‌ಗೆ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 22/2026ರಡಿ, ಬಿಎನ್‌ಎಸ್‌ಎಸ್‌ ಕಲಂ 194ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!