ಶಿಕ್ಷಣ
ದೊಡ್ಡಮ್ಮನ ಜತೆಗೆ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿ ಸಾವು
Views: 33
ಕನ್ನಡ ಕರಾವಳಿ ಸುದ್ದಿ: ದೊಡ್ಡಮ್ಮನ ಜತೆಗೆ ಶಾಲೆಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ದಾರುಣ ಸಾವಿಗೀಡಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದ ಬಳಿ ನಡೆದಿದ್ದು 10 ವರ್ಷದ ಲಿಖಿತಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಲಿಖಿತ ಸರಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಾಯಿ ತಿಂಡಿ ಮಾಡಿಸಿ ಕೆಲಸಕ್ಕೆ ಕೆಲಸಕ್ಕೆ ತೆರಳಿದ್ದಾರೆ. ನಂತರ ಲಿಖಿತಾ ತನ್ನ ದೊಡ್ಡಮ್ಮನ ಜತೆಗೆ ಶಾಲೆಗೆ ತೆರಳುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಲಿಖಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನೂ ನೆಲಮಂಗಲ ಮಾರ್ಗದಿಂದ ಕುಣಿಗಲ್ ಕಡೆ ಸಾಗುತ್ತಿದ್ದ ಕಾರು, ಚಾಲಕನ ನಿರ್ಲಕ್ಷ್ಯದಿಂದ ವೇಗವಾಗಿ ಬಂದು ಡಿಕ್ಕಿಯಾಗಿದೆ. ಘಟನೆಯಲ್ಲಿ ಲಿಖಿತಾಳ ದೊಡ್ಡಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






