ಶಿಕ್ಷಣ

ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ‘ವಾಲ್ಬೆಲ್ಲ’ಸಾಂಸ್ಕೃತಿಕ ರಂಗಾಭಿವ್ಯಕ್ತಿ, ಚಿತ್ರಕಲಾ ಸ್ಪರ್ಧೆ ಉದ್ಘಾಟನೆ

Views: 79

ಕನ್ನಡ ಕರಾವಳಿ ಸುದ್ದಿ: ಯಡಾಡಿ-ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಜಂಟಿ ಆಶ್ರಯದಲ್ಲಿ ‘ವಾಲ್ಬೆಲ್ಲ’ ಸಾಂಸ್ಕೃತಿಕ ರಂಗಾಭಿವ್ಯಕ್ತಿ, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಥಮ ವರ್ಷದ ‘ವಿದ್ಯಾರಣ್ಯ ಪುರಸ್ಕಾರ’ ಪ್ರದಾನ ಸಮಾರಂಭ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಜುಲೈ 6ರಂದು ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗಾಗಿ ನಡೆದ ವಿಶೇಷ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ. ಕುಂದಾಪ್ರ ಕನ್ನಡ ಭಾಷಿಕ ವಲಯದ ಬೈಂದೂರು, ಕುಂದಾಪುರ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನ ಪಿಯುಸಿ ಮತ್ತು ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಕುಂದಾಪ್ರ ನೆಲಮೂಲದ ಸಾಂಸ್ಕೃತಿಕ ಅನನ್ಯತೆಯನ್ನು ಬಿಂಬಿಸುವ ರಂಗಾಭಿವ್ಯಕ್ತಿ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವು ನಡೆಯಿತು.

ಮಾಜಿ ಸಚಿವರು ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯರು ಶ್ರೀ.ಕೆ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.ಅವರು ಮಾತನಾಡಿ, ಕುಂದಾಪುರ ಸಂಸ್ಕೃತಿಯನ್ನು ಕುಂದಾಪುರ ಅಧ್ಯಯನ ಪೀಠದಿಂದ ಉಳಿಸಲು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮನೆ ಮನೆಯಲ್ಲಿ ಕುಂದಾಪುರ ಭಾಷೆ ಮಾತಾಡದಿದ್ದರೆ ಅದರ ನೆನಪೆ ಹೋಗುತ್ತದೆ ಆ ನಿಟ್ಟಿನಲ್ಲಿ ಕುಂದಾಪುರ ಕನ್ನಡದ ಉಳಿಸಿ ಬೆಳೆಸುವ ಕಾರ್ಯಕ್ರಮ ಇದಾಗಿದೆ ಎಂದರು. ಕುಂದಗನ್ನಡದ ಭಾಷೆಯ ಜೊತೆಗೆ ಪುಸ್ತಕ ಬಿಡುಗಡೆಯಾದರೆ ಅದರಿಂದ ಎಲ್ಲರಿಗೂ ಉಪಯೋಗವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಗ್ ಬಾಸ್ ಖ್ಯಾತಿಯ ಚಿತ್ರನಟಿ ಅಶ್ವಿನಿ ಗೌಡ ಅವರು ಮಾತನಾಡಿ, ಕುಂದಾಪುರದ ಪರಿಸರ ತುಂಬಾ ಖುಷಿಯಾಯಿತು. ಜನರು ಇಟ್ಟ ಪ್ರೀತಿಗಾಗಿ ನಾನು ಕುಂದಾಪುರಕ್ಕೆ ಬರಬೇಕಾಯಿತು ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಮಾನವೀಯತೆ, ಮನುಷ್ಯತ್ವ ಇದ್ದರೆ ಸಾಲದು ಜಾತಿ ಧರ್ಮ ವಯಸ್ಸು ಮುಖ್ಯವಲ್ಲ ಎಂದರು.

ಮಂಗಳೂರು ವಿವಿ ನಿವೃತ್ತ ಕುಲಪತಿಗಳಾದ ರಾಜು ಮೊಗವೀರ ಮಾತನಾಡಿ, ಇಂತಹ ಒಳ್ಳೆಯ ಕಾರ್ಯಕ್ರಮದ ಮೂಲಕ ನಮ್ಮ ಭಾಷೆಯನ್ನು ಸಂಭ್ರಮಿಸುವ ಕಾಲ ಬಂದಿದೆ. ಭಾಷೆ ಬಗ್ಗೆ ದೇವರು, ದೈವ ನಮ್ಮ ಅಂಗವಾಗಬೇಕು ಆವಾಗ ಭಾಷೆಯ ಬಗ್ಗೆ ಅಭಿಮಾನ ಬೆಳೆಯುತ್ತದೆ. ಇದರಿಂದ ಬದುಕು. ಬದುಕಿನಿಂದ ಭಾಷೆ ಹೊರಹೊಮ್ಮುತ್ತದೆ ಎಂದರು.

ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ನಾಗಪ್ಪ ಗೌಡ. ಆರ್ ಅವರು ಮಾತನಾಡಿ, ಕುಂದಾಪುರ ಕನ್ನಡದ ಸಂಸ್ಕೃತಿ ಭಾಷೆ ಉಳಿಸುವ ಕೆಲಸ ಮಕ್ಕಳಿಂದ ಆಗಬೇಕು ಆ ನಿಟ್ಟಿನಲ್ಲಿ ವಿದ್ಯೆ ಜೊತೆಗೆ ಮಾನವೀಯ ಮೌಲ್ಯ ಉಳಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ರಾಜು ಮೊಗವೀರ, ನಾಗಪ್ಪ ಗೌಡ, ಚಿತ್ರನಟಿ ಅಶ್ವಿನಿ ಗೌಡ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಆಚಾರ ವಿಚಾರ ಬೆಳೆಸಲು ಕುಂದಾಪುರ ಭಾಷೆ ಮಾತನಾಡುವುದರಿಂದ ಮಾತ್ರವಲ್ಲ ಅದು ಕೇವಲ ವಿದ್ಯಾಸಂಸ್ಥೆಯಿಂದ ಮಾತ್ರ ಸಾಧ್ಯ ಅದಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ವೇದಿಕೆಯಲ್ಲಿ ಡಾ. ರೇಖಾ ಬನ್ನಾಡಿ, ಜುಡಿಟ್ ಮೆಂಡೋನ್ಸಾ, ಉದಯ್ ಶೆಟ್ಟಿ ಪಡುಕೆರೆ, ರಾಜೇಶ್ ಕೆ.ಸಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಯರತ್ನ ಚಾರಿ ಟೇಬಲ್ ಟ್ರಸ್ಟ್ ಪ್ರರ್ತಕ, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಕುಂದಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಉದ್ಯಮಿ ಜಗನಾಥ ಶೆಟ್ಟಿ ಉಪಸ್ಥಿತರಿದ್ದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ವಂದಿಸಿದರು.

Related Articles

Back to top button
error: Content is protected !!