ಯುವಜನ

ಪ್ರಯಾಣಿಸುತ್ತಿರುವಾಗ ಪ್ರೇಯಸಿಗೆ ಚೂರಿಯಿಂದ ಇರಿದು ಕಾರು ಸ್ಫೋಟಿಸಿಕೊಂಡ ಭಗ್ನಪ್ರೇಮಿ ಸಜೀವ ದಹನ

Views: 78

ಕನ್ನಡ ಕರಾವಳಿ ಸುದ್ದಿ: ಪ್ರೇಯಿಸಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆಯೇ ಕಾರು ಸ್ಫೋಟಗೊಳಿಸಿ ಭಗ್ನಪ್ರೇಮಿಯೋರ್ವ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಶನಿವಾರ ನಡೆದಿದೆ.

ಕಾರಲ್ಲಿದ್ದ ಅಂಕೋಲ ಮೂಲದ ನಾಗೇಂದ್ರ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ನಾಗೇಂದ್ರ ಕಾರಿನಲ್ಲಿ ಯುವತಿಗೆ ಚೂರಿಯಿಂದ ಇರಿದ ತಕ್ಷಣವೇ ಚಾಲಕ ಕಾರು ನಿಲ್ಲಿಸಿದ್ದ. ಬಳಿಕ ಯುವತಿ ಮತ್ತು ಕಾರು ಚಾಲಕ ಹೊರಗೆ ಬಂದಿದ್ದು, ಈ ವೇಳೆ ಕಾರು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

ಇರಿತಕ್ಕೊಳಗಾಗಿದ್ದ ಯುವತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಕಾರು ಚಾಲಕ ಪ್ರವೀಣ್ ಎಂಬುವರು ಘಟನೆಯಲ್ಲಿ ಪಾರಾಗಿದ್ದಾರೆ.

ಗಾಯಗೊಂಡಿರುವ ಯುವತಿ ಮತ್ತು ನಾಗೇಂದ್ರ ಒಂದೇ ಊರಿನವರಾಗಿದ್ದು, ರಿಲೇಷನ್ ಶಿಪ್ ನಲ್ಲಿದ್ದರು. ಆದರೆ ಇತ್ತೀಚೆಗೆ ಇವರ ಮಧ್ಯೆ ಜಗಳ ಆಗಿ ಬ್ರೇಕ್ ಅಪ್ ಆಗಿತ್ತು ಎಂಬುದು ತಿಳಿದುಬಂದಿದೆ. ಬೆಂಗಳೂರಿನಿಂದ ಉಬರ್ ಕಾರಲ್ಲಿ ಅಂಕೋಲಗೆ ತೆರಳುತ್ತಿದ್ದರು ಎಂದು ಎಸ್ಪಿ ಅಶೋಕ್ ತಿಳಿಸಿದರು.

 

 

Related Articles

Back to top button
error: Content is protected !!