ಶ್ರೀವಾಣಿ ಪ್ರೌಢಶಾಲೆ, ರಜತಾದ್ರಿ ನಡೂರು: ಶಾಲೆಯ ಕೈತೋಟದಲ್ಲಿ ಹಣ್ಣಿನ ತೋಟ ನಿರ್ಮಾಣ
Views: 158
ಕನ್ನಡ ಕರಾವಳಿ ಸುದ್ದಿ: ಶ್ರೀವಾಣಿ ಪ್ರೌಢಶಾಲೆ, ರಜತಾದ್ರಿ ನಡೂರು ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರಲ್ ಕಂಪನಿ ಹಾಗೂ ಶ್ರೀವಾಣಿ ಪ್ರೌಢಶಾಲೆಯ ಇಕೋ ಕ್ಲಬ್ಬಿನ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆಯ ಸಲುವಾಗಿ ಸುಮಾರು 50 ಹಣ್ಣಿನ ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಶಾಲೆಯ ಕೈತೋಟದಲ್ಲಿ ಹಣ್ಣಿನ ತೋಟವನ್ನು ಜೂನ್ 18ರಂದು ನಿರ್ಮಾಣ ಮಾಡಲಾಯಿತು.
ಪ್ರೊಫೆಸರ್ ಸಖಾರಾಮ ಸೋಮಯಾಜಿ ಗೌರವ ಮಾರ್ಗದರ್ಶಕರು ಶ್ರೀವಾಣಿ ವಿದ್ಯಾ ಅಭಿವೃದ್ಧಿ ಸಂಘ ರಜತಾದ್ರಿ ನಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯ ಶ್ರೀ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಇಕೋ ಕ್ಲಬ್ಬಿನ ಮಾರ್ಗದರ್ಶಕರಾದ ವಿಜ್ಞಾನ ಶಿಕ್ಷಕಿ ಶಶಿಕಲಾ ಶೆಟ್ಟಿ ಇಕೋ ಕ್ಲಬ್ ಹಾಗೂ ಪರಿಸರದ ಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ಹೆಬ್ಬಗೋಳಿ ಪ್ರವೀಣ್ ಕುಮಾರ್ ಇವರು ಎಲ್ಲ ಮಕ್ಕಳಿಗೂ ಹಣ್ಣಿನ ಗಿಡವನ್ನು ಉಚಿತವಾಗಿ ವಿತರಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರೇರಣೆಯನ್ನು ಮೂಡಿಸಿದ್ದರು.
ಡಾ. ರೇವಣ್ಣ ರೇವಣ್ಣವರ ವಿಜ್ಞಾನಿ ಪ್ರಾಧ್ಯಾಪಕರು ಸಹ ನಿರ್ದೇಶಕರು ಕೃಷಿ ಇಲಾಖೆ ಬ್ರಹ್ಮಾವರ ಶ್ರೀಯುತರು ಪರಿಸರದಲ್ಲಿನ ಅಸಮತೋಲನಕ್ಕೆ ಕಾರಣ ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ಪರಿಸರ ಮತ್ತು ಜೀವ ಸಂಕುಲಕ್ಕೂ ಇರುವಂತಹ ಸಂಬಂಧದ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ- ಶಿಕ್ಷಕೇತರರು ಉಪಸ್ಥಿತರಿದ್ದರು. ಶ್ರೀಮತಿ ಚರಿಷ್ಮಾ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು ಶಿಕ್ಷಕಿ ಸುಗುಣ ಶೆಟ್ಟಿ ವಂದಿಸಿದರು.









