ಶಿಕ್ಷಣ

ಶಾಲೆಯಲ್ಲಿ ಜಗಳವಾಡಿ ನೊಂದು ವಿಷ ಸೇವಿಸಿದ್ದ ಮುಖ್ಯ ಶಿಕ್ಷಕ ಫಲಕಾರಿಯಾಗದೆ ಸಾವು 

Views: 49

ಕನ್ನಡ ಕರಾವಳಿ ಸುದ್ದಿ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಹಶಿಕ್ಷಕರು ಹಾಗೂ ಅಡುಗೆ ಕೆಲಸದವರೊಂದಿಗೆ ಜಗಳವಾಡಿ ನೊಂದು ವಿಷ ಸೇವಿಸಿದ್ದ ಮುಖ್ಯ ಶಿಕ್ಷಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

ಸಹಶಿಕ್ಷಕರು, ಅಡುಗೆ ಕೆಲಸದವರು ಮತ್ತು ಮುಖ್ಯ ಶಿಕ್ಷಕರ ಮಧ್ಯ ಒಳಜಗಳದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಯ ಶೌಚಾಲಯಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯ ಶಿಕ್ಷಕರಾದ ಜಯಪ್ಪ(55) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಜಯಪ್ಪ ಅವರನ್ನು ಸ್ಥಳೀಯರು, ಶಿಕ್ಷಕರು ತಕ್ಷಣವೇ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದರು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ‌.

 

Related Articles

Back to top button
error: Content is protected !!