ಆರೋಗ್ಯ

ಇನ್ಮುಂದೆ ಕೆಮ್ಮಿನ ಸಿರಪ್ ಖರೀದಿಸಲು ವೈದ್ಯರ ವೈದ್ಯರ ಚೀಟಿ ಕಡ್ಡಾಯ

Views: 25

ಕನ್ನಡ ಕರಾವಳಿ ಸುದ್ದಿ: ಭಾರತ ಸರ್ಕಾರವು ಔಷಧ ಮಾರಾಟ  ನಿಯಮಗಳಲ್ಲಿ ಬದಲಾವಣೆ ಮಾಡಿ, ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ಸಿರಪ್ ರೂಪದ ಔಷಧಿಗಳನ್ನು ಇನ್ನು ಮುಂದೆ ವೈದ್ಯರ ಅನುಮತಿ ಇಲ್ಲದೆ ಮಾರಾಟ ಮಾಡಬಾರದೆಂದು ನಿಯಮ ಜಾರಿಗೊಳಿಸಿದೆ.

ಈ ನಿರ್ಧಾರವನ್ನು ಕೆಮ್ಮಿನ ಸಿರಪ್‌ಗಳ ದುರುಪಯೋಗವನ್ನು ತಡೆಯಲು ಹಾಗೂ ಕೆಲವು ಕಲುಷಿತ ಸಿರಪ್‌ಗಳಿಂದ ಮಕ್ಕಳ ಸಾವಿನಂತಹ ಘಟನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸಲು ತೆಗೆದುಕೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ ಔಷಧ ಅಂಗಡಿಗಳು ವೈದ್ಯರ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಕೆಮ್ಮಿಗೆ ಬಳಸುವ ಕೆಲವು ಮಾತ್ರೆಗಳು ಮತ್ತು ಲೋಜೆಂಜ್‌ಗಳು  ಈ ನಿಯಮದ ವ್ಯಾಪ್ತಿಗೆ ಬರುವುದಿಲ್ಲ.

ಈ ಬಗ್ಗೆ ಸರ್ಕಾರ ಮೊದಲು ಕರಡು ಅಧಿಸೂಚನೆ ಹೊರಡಿಸಿತ್ತು; ಆಕ್ಷೇಪಣೆಗಳು ಬಂದ ಕಾರಣ ಈಗ ನಿಯಮವನ್ನು ಜಾರಿಗೆ ತಂದಿದೆ.

ಕೆಲವು ವರ್ಷಗಳಲ್ಲಿ ಕಳಪೆ ಗುಣಮಟ್ಟದ ಅಥವಾ ವಿಷಕಾರಿ ಅಂಶಗಳನ್ನು ಹೊಂದಿದ್ದ ಕೆಮ್ಮಿನ ಸಿರಪ್‌ಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯ ಘಟನೆಗಳು ಮತ್ತು ಸಾವುಗಳ ಪ್ರಕರಣಗಳು ವರದಿಯಾಗಿದ್ದವು.

ಔಷಧಗಳ ಸುರಕ್ಷತೆ ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇನ್ಮುಂದೆ ಸಾಮಾನ್ಯವಾಗಿ ಮೆಡಿಕಲ್ ಅಂಗಡಿಗೆ ಹೋಗಿ ಕೆಮ್ಮಿನ ಸಿರಪ್ ಅನ್ನು ನೇರವಾಗಿ ಖರೀದಿಸಲು ಸಾಧ್ಯವಾಗುವುದಿಲ್ಲ.

ವೈದ್ಯರನ್ನು ಸಂಪರ್ಕಿಸಿ ಪ್ರಿಸ್ಕ್ರಿಪ್ಪನ್ ಪಡೆದವರಿಗೆ ಮಾತ್ರ ಕೆಮ್ಮಿನ ಸಿರಪ್ ಕೊಡಬೇಕಾಗುತ್ತದೆ

ಫಾರ್ಮಸಿಗಳು ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ

Related Articles

Back to top button
error: Content is protected !!