ಶಿಕ್ಷಣ

ಕೋಟ ವಿವೇಕ ಪದವಿ ಪೂರ್ವ ಕಾಲೇಜು:ವಿದ್ಯಾರ್ಥಿ ನಾಯಕನ ಆಯ್ಕೆಗೆ ಸಂಸದೀಯ ಮಾದರಿಯ ಚುನಾವಣೆ

Views: 20

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2026-27 ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇವಿಎಂ ಮೂಲಕ ಚುನಾವಣೆ ನಡೆಸಲಾಯಿತು.

ಬೆಳಿಗ್ಗೆ ಚುನಾವಣೆ ಬಗ್ಗೆ ಘೋಷಣೆ, ನಾಮಪತ್ರ ಸಲ್ಲಿಸಲು ಅವಕಾಶ, ನಾಮಪತ್ರ ಪರಿಶೀಲನೆ ನಡೆಸಿ ಬಳಿಕ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. 

ಚುನಾವಣಾ ಅಭ್ಯರ್ಥಿ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ತೆರಳಿ ಮತಯಾಚನೆಗೆ ಅವಕಾಶ ಕಲ್ಪಿಸಲಾಯಿತು. 

ಕಾಲೇಜು ಮುಖಂಡನ ಸ್ಥಾನಕ್ಕೆ10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. 

 ಹೈಸ್ಕೂಲ್ ವಿಭಾಗದಿಂದ ಉಪ ಮುಖಂಡ ಸ್ಥಾನಕ್ಕೆ 2 ಸ್ಪರ್ಧಿಸಿದ್ದರು. 

ಕಾಲೇಜು ಮುಖಂಡನ ಸ್ಥಾನಕ್ಕೆ ದ್ವಿತೀಯ ಪಿಯುಸಿ ಬಿ ವಿಭಾಗದ ನಿಶಾಂತ್ ಪಿ ಕಿಣಿ ಮತ್ತು ಉಪಮುಖಂಡನ ಸ್ಥಾನಕ್ಕೆ ಪ್ರೌಢಶಾಲಾ ವಿಭಾಗದ ಪ್ರಥಮ್ ಇವರು ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ಉಪನ್ಯಾಸಕರು,ಅಧ್ಯಾಪಕ ಮತ್ತು ಸಿಬ್ಬಂದಿಗಳು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ವೇದಿಕೆಯಲ್ಲಿ ಹೈಸ್ಕೂಲ್ ವಿಭಾಗದ ಶ್ರೀ ಪ್ರೇಮಾನಂದ, ಚುನಾವಣಾ ಸಂಚಾಲಕರಾದ ಶ್ರೀ ಗಣೇಶ್ ಕುಮಾರ್ ಶೆಟ್ಟಿ, ಶ್ರೀ ಸುವೀರ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಮತದಾನ , ಮತದಾನದ ಹಕ್ಕು ಮತ್ತು ನಿರ್ಭೀತಿಯಿಂದ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು.

Related Articles

Back to top button
error: Content is protected !!