ಶಿಕ್ಷಣ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ: ಡಾ. ಸುನಿತಾ ವಿ ಅವರಿಗೆ ನಿವೃತ್ತಿ ಬೀಳ್ಕೊಡುಗೆ 

Views: 54

ಕನ್ನಡ ಕರಾವಳಿ ಸುದ್ದಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸಮಾಜಶಾಸ್ತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದುವ ಪ್ರಾಧ್ಯಾಪಕರಾದ ಡಾ. ಸುನಿತಾ ಇವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್ ನಾಯಕ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗೀತಾಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ್ ಸಿ ಕುಂದರ್ ನಿವೃತ್ತಿಯಾಗುತ್ತಿರುವ ಪ್ರಾಧ್ಯಾಪಕರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾಗಿ ಡಾ. ರಮೇಶ್ ಆಚಾರ್, ಐ ಕ್ಯೂ ಎಸಿ ಸಂಚಾಲಕರಾದ ಡಾ. ಸುಬ್ರಮಣ್ಯ, ಸಿಬ್ಬಂದಿ ಕಾರ್ಯದರ್ಶಿಯಾದ ಡಾ.ಶಂಕರ ನಾಯಕ್ ಬಿ ಹಾಗೂ ಕಡೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಪ್ರಸಾದ್ ಬಿಲ್ಲವ ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ.ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ರಾಮಚಂದ್ರ ಭಟ್ಟ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ವಂದಿಸಿದರು.

Related Articles

Back to top button
error: Content is protected !!