ಇತರೆ
ಕುಂದಾಪುರ: ಮೂಡುಬಗೆ ಸೇತುವೆ ಬಳಿ ಬೈಕಿಗೆ ಬಸ್ ಡಿಕ್ಕಿ, ಸವಾರ ಸಾವು
Views: 157
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರದ ಮೂಡುಬಗೆ ಬಳಿಯ ಬಾಳ್ಳಟ್ಟು ಸೇತುವೆ ಬಳಿ ಖಾಸಗಿ ಬಸ್ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದಾರೆ.
ಬಸವ ನಾಯ್ಕ (80) ಮೃತಪಟ್ಟರು.ಬಸ್ ಸಿದ್ದಾಪುರದಿಂದ ಕುಂದಾಪುರದ ಕಡೆಗೆ ಸಾಗುತ್ತಿತ್ತು. ಬೈಕ್ ಸವಾರ ಅಂಪಾರು ಕಡೆಯಿಂದ ತನ್ನ ಮನೆ ಶಾನ್ನಟ್ಟು ಕಡೆಗೆ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಸವ ನಾಯ್ಕ ಅವರನ್ನು ಸ್ಥಳೀಯರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು, ಅವರು ಮೃತಪಟ್ಟಿರುವುದಾಗಿ ತಿಳಿಸಿದರು.
ಪ್ರೇಮಾನಂದ ಶೆಟ್ಟಿ ಕನ್ಯಾನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





