ಸಾಮಾಜಿಕ

ತಾಳಿ ಕಟ್ಟಿದ ಹೆಂಡತಿಯನ್ನೇ 50 ಸಾವಿರಕ್ಕೆ ಮಾರಾಟ ಮಾಡಿದ ಪತಿರಾಯ! 

Views: 108

ಕನ್ನಡ ಕರಾವಳಿ ಸುದ್ದಿ: ತಾಳಿ ಕಟ್ಟಿಕೊಂಡು ತನ್ನೊಂದಿಗೆ ಸಪ್ತಪದಿ ತುಳಿದಿದ್ದ ಹೆಂಡತಿ ತನಗೆ ಇಷ್ಟವಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಆಕೆಯನ್ನು ಕೇವಲ 50 ಸಾವಿರ ರೂಪಾಯಿಗೆ ಮಾರಾಟ ಮಾಡಿ ಆಘಾತ ಮತ್ತು ಅಚ್ಚರಿ ಮೂಡಿಸಿದ್ದಾನೆ.

ಕೇವಲ ಐವತ್ತು ಸಾವಿರಕ್ಕೆ ಕೊಂಡ ದುರುಳರು ಆಕೆಯನ್ನು ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ಸೇರಿ ಏಳು ಕಿರಾತಕರನ್ನು ಬಂಧಿಸಿದ್ದಾರೆ.

ಮಾರಾಟ ಮಾಡಿ ನಾಪತ್ತೆ ದೂರು ನೀಡಿದ ಪತಿ: ಅಚ್ಚರಿಯ ಪ್ರಕರಣ ನಡೆದಿರುವುದು ಬನಸ್ಕಾಂತ ಜಿಲ್ಲೆಯ ಪಾಲನ್ಪುರದಲ್ಲಿ. ದುರುಳ ಪತಿ ತನ್ನಾಕೆಯನ್ನು ಇತರರಿಗೆ ಮಾರಾಟ ಮಾಡಿದ ಬಳಿಕ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಪತಿಯ ನಡವಳಿಕೆ ಮತ್ತು ಹೇಳಿಕೆಗಳು ಅನುಮಾನ ಮೂಡಿಸಿವೆ.

ಆತನನ್ನೇ ಪೊಲೀಸರು ಕಠಿಣ ವಿಚಾರಣೆ ನಡೆಸಿದಾಗ, ತಾನೇ ಆಕೆಯನ್ನು ಹಣಕ್ಕಾಗಿ ಮಾರಾಟ ಮಾಡಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ. ತಕ್ಷಣವೇ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಇತರ ಆರೋಪಿಗಳಿಂದ ರಕ್ಷಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಪತಿ ತನ್ನ ಪತ್ನಿಯನ್ನು ಇತರರಿಗೆ 50 ಸಾವಿರಕ್ಕೆ ಮಾರಾಟ ಮಾಡಿದ್ದ. ಬಳಿಕ ಆತನೇ ನಾಪತ್ತೆ ದೂರು ನೀಡಿದ್ದ. ವಿಚಾರಣೆಯ ವೇಳೆ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದವು. ತನಗೆ ಆಕೆ ಇಷ್ಟವಿಲ್ಲದ ಕಾರಣ ಮಾರಾಟ ಮಾಡಿದ್ದೇನೆ ಎಂದು ಆರೋಪಿ ತಿಳಿಸಿದ್ದಾನೆ. ಈತನ ವಿರುದ್ಧ ಮಾನವ ಕಳ್ಳಸಾಗಣೆ, ಕೌಟುಂಬಿಕ ದೌರ್ಜನ್ಯ ಸೇರಿ ವಿವಿಧ ಆರೋಪಗಳಡಿ ದೂರು ದಾಖಲಿಸಿ ಬಂಧಿಸಲಾಗಿದೆ.

 

Related Articles

Back to top button
error: Content is protected !!