ಆರ್ಥಿಕ
₹.2000 ನೋಟು ವಿನಿಮಯ ಮಾಡಿಕೊಳ್ಳಲು ಸೆ.30 ಕೊನೆಯ ದಿನ : ಶೇ.80 ರಷ್ಟು ನೋಟು ವಾಪಸ್

Views: 0
ಮೇ ತಿಂಗಳಲ್ಲಿ ಹೆಚ್ಚಿನ ಮೌಲ್ಯದ ₹.2000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ₹ 3.14 ಲಕ್ಷ ಕೋಟಿ ಮೌಲ್ಯದ ಶೇ. 88 ರಷ್ಟು ₹ 2000 ನೋಟುಗಳು ಬ್ಯಾಂಕುಗಳಿಗೆ ವಾಪಾಸ್ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ನಿನ್ನೆಯವರೆಗೂ ಚಲಾವಣೆಯಿಂದ ವಾಪಾಸು ಪಡೆದ ₹.2000 ನೋಟುಗಳ ಒಟ್ಟು ಮೌಲ್ಯ 3.14 ಲಕ್ಷ ಕೋಟಿ ರೂ.ಎಂದು ಆರ್ ಬಿಐ ಹೇಳಿದೆ.
ಮೇ 19 ರಿಂದ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು. ನಿನ್ನೆ ಬ್ಯಾಂಕ್ ವ್ಯವಹಾರ ಮುಕ್ತಾಯದ ವೇಳೆ ಶೇ. 88 ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ.
ಈ ನೋಟುಗಳ ಪೈಕಿ ಶೇ. 87 ರಷ್ಟು ಠೇವಣಿ ರೂಪದಲ್ಲಿ ಬಂದಿದ್ದು, ಉಳಿದ ಶೇ. 13ರಷ್ಟು ಹಣವನ್ನು ಇತರ ಮೂಲಗಳಿಂದ ನೋಟುಗಳಿಗೆ ಬದಲಾಯಿಸಲಾಗಿದೆ..
ನೋಟುಗಳ ವಿನಿಮಯ ಅಥವಾ ಠೇವಣಿ ಮಾಡಲು ಸೆ. 30 ಕೊನೆಯ ದಿನವಾಗಿದೆ.






