ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್!
Views: 192
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಹತ್ತರ ಬದಲಾವಣಗೆ ಕರ್ನಾಟಕ ಸರ್ಕಾರ ನಾಂದಿ ಹಾಡಿದೆ. ಇದುವರಗೆ ಕೇವಲ ಒಂದರಿಂದ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡುತ್ತಿತ್ತು. ಆದರೆ ಇದೀಗ ಈ ಯೋಜನೆಯು ಪದವಿ ಪೂರ್ವ ಪಿಯುಸಿ ಹಂತಕ್ಕೂ ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿದೆ.
ಪ್ರತಿ ಬಾರಿ ಶೈಕ್ಷಣಿಕ ವರ್ಷ ಆರಂಭವಾದಾಗಲೂ ಪೋಷಕರ ಎದೆಯಲ್ಲಿ ಒಂದು ಆತಂಕ ಮನೆ ಮಾಡಿರುತ್ತದೆ. ಅದೇ ರೀತಿ ಈಗ 10ನೇ ತರಗತಿ ಮುಗಿಸಿ PUC ವಿದ್ಯಾಭ್ಯಾಸಕ್ಕೆ ಸಜ್ಜಾಗಿರುವ ವಿದ್ಯಾರ್ಥಿಗಳ ಪೋಷಕರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪುಸ್ತಕಗಳನ್ನು ಎಲ್ಲಿ ಖರೀದಿಸುವುದು ಎಷ್ಟು ಖರ್ಚಾಗುತ್ತದೆ. ಅಷ್ಟೋಂದು ಸಾವಿರಾರು ರೂಪಾಯಿ ಹಣವನ್ನು ಎಲ್ಲಿಂದ ತರುವುದು ಅಂತಾ ಯೋಚನೆ ಮಾಡುತ್ತಾರೆ. ಮಧ್ಯಮ ವರ್ಗದ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಕ್ಕೆ ಎಲ್ಲಿದ ಹಣ ಒದಗಿಸುವುದು ಅಂತಾ ಯೋಚಿಸುತಲ್ಲೆ ಇರುತ್ತಾರೆ.
ಇನ್ನೂ ಮಂದೆ ಪೋಷಕರರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅಂದರೆ ಪುಸ್ತಕಗಳ ಕೊಡಿಸುವ ಬಗ್ಗೆ ಚಿಂತೆ ಮಾಡುವಂತಿಲ್ಲ ರಾಜ್ಯ ಸರ್ಕಾರ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪಟ್ಟ ಕಷ್ಟವನ್ನು ಅರಿತು PUC ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪಠ್ಯ ಪುಸ್ತಕ ನೀಡುವ ಮೂಲಕ ಶಾಶ್ವತ ಪರಿಹಾರ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರ ಮಕ್ಕಳ ಓದಿನ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಉಚಿತವಾಗಿ ಪುಸ್ತಕ ವಿತರಿಸಲು ಮುಂದಾಗಿದೆ. ಇದರ ಪ್ರಕಾರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಇನ್ನು ಬುಕ್ ಸ್ಟಾಲ್‌ನಲ್ಲಿ ಹಣ ನೀಡಿ ಪುಸ್ತಕ ಖರೀದಿಸುವಂತಿಲ್ಲ. ನಿಮ್ಮ ಕಾಲೇಜು ಆರಂಭವಾದ ದಿನವೆ ತಮ್ಮ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗುವುದು ಎಂದು ರಾಜ್ಯ ಸರ್ಕಾರ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಈ ಹಿಂದೆ ಪ್ರತಿವರ್ಷ ಕಾಲೇಜು ಆರಂಭವಾದರೂ ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕೆ ಪುಸ್ತಕಗಳು ಸಿಗದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಕೊರತೆಯನ್ನು ಸರಿಪಡಿಸುವ ಸಲುವಾಗಿ ಸರ್ಕಾರವೇ ನೇರವಾಗಿ ಕಾಲೇಜುಗಳಿಗೆ ಪುಸ್ತಕ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ.






