ಶಿಕ್ಷಣ

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿ 

Views: 46

ಕನ್ನಡ ಕರಾವಳಿ ಸುದ್ದಿ: ನೀಟ್ ಪ್ರಶ್ನೆ ಪತ್ರಿಕೆ ಅಕ್ರಮದ ಬೆನ್ನಲ್ಲೇ ಬರೆದ ಪರೀಕ್ಷೆ ರದ್ದಾದ ಬೆನ್ನಲ್ಲೇ ನೀಟ್ ಆಕಾಂಕ್ಷಿಗಳು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ನೀಟ್ ಮರು ಪರೀಕ್ಷೆಯನ್ನು ಜೂನ್ 21ಕ್ಕೆ ನಿಗದಿಗೊಳಿಸಲಾಗಿದೆ. ಆದಾಗ್ಯೂ ಆತಂಕದಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ.

ರಾಜಸ್ಥಾನದಲ್ಲಿ ನೀಟ್ ಆಕಾಂಕ್ಷಿಯೊಬ್ಬ ನೇಣಿಗೆ ಶರಣಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿಯೂ ಇಂತದ್ದೇ ಘಟನೆ ನಡೆದಿದೆ. ನೀಟ್ ಆಕಾಂಕ್ಷಿ 21 ವರ್ಷದ ರಿತಿಕ್ ಮಿಶ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಖೀಂಪುರ ಬೀದಿಯ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವರ್ಷ ಮೂರನೇ ಬಾರಿಗೆ ರಿತಿಕ್ ನೀಟ್ ಪರೀಕ್ಷೆ ಬರೆದಿದ್ದರು. ಈ ಸಲ ಪಾಸ್ ಆಗಿ ತಾನು ವೈದ್ಯನಾಗುವ ಮಹದಾಸೆ ಹೊಂದಿದ್ದರು. ಆದರೆ ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ನೇಣಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ರಾಜಸ್ಥಾನದಲ್ಲಿ ನೀಟ್ ಆಕಾಂಕ್ಷಿ ಪ್ರದೀಪ್ ಮಹೀಚ್ ಎಂಬಾತ ಜುಂಜುನು ಜಿಲ್ಲೆಯಲ್ಲಿ ನೇಣುಗೆ ಕೊರಳೊಡ್ದಿದ್ದರು. ಈ ಬಾರಿ ನೀಟ್ ನಲ್ಲಿ 650 ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಪ್ರದೀಪ್ ಗೆ ಪರೀಕ್ಷೆ ರದ್ದಾಗಿದ್ದು, ಆಘಾತವನ್ನುಂಟು ಮಾಡಿತ್ತು. ಇದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದಾರೆ.

Related Articles

Back to top button
error: Content is protected !!