ಶಿಕ್ಷಣ
ಮೇ 21ರಂದು ಕೋಟೇಶ್ವರದಲ್ಲಿ ಚಿರಂತನ ಶಿಕ್ಷಣ ಸಂಸ್ಥೆಗಳ ಉದ್ಘಾಟನಾ ಸಮಾರಂಭ
Views: 1
ಕನ್ನಡ ಕರಾವಳಿ ಸುದ್ದಿ: ಸುಲೋಚನಾ ಸರ್ವೋತ್ತಮ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಚಿರಂತನ ಶಿಕ್ಷಣ ಸಂಸ್ಥೆಗಳ ನೂತನ ಉದ್ಘಾಟನಾ ಸಮಾರಂಭ ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರ ತಾಲೂಕಿನ ಕೋಟೇಶ್ವರದ ‘ಲೋಟಸ್ ಎಡ್ಜ್’ ಯುವಮೇರಿಡಿಯನ್ ಹತ್ತಿರ ಇಲ್ಲಿ ನಡೆಯಲಿದೆ.
ಫ್ರೀ ಸ್ಕೂಲ್, ಶಿಕ್ಷಕರ ತರಬೇತಿ ಕೋರ್ಸ್, ವೃತ್ತಿಪರ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ಕೋರ್ಸ್,ಮಕ್ಕಳು ಮತ್ತು ಹದಿ ಹರೆಯದವರ ಮಾರ್ಗದರ್ಶನ, ಶಿಕ್ಷಕರ ಕೌಶಲಾಭಿವೃದ್ಧಿ ಕೇಂದ್ರವನ್ನು ಬೈಂದೂರಿನ ಮಾಜಿ ಶಾಸಕ, ಕುಂದಾಪುರ ಎಜುಕೇಶನ್ ಸೊಸೈಟಿಯ ಸಂಚಾಲಕರಾದ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ, ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ, ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಡಾ. ಪ್ರಕಾಶ್ ಸಿ ತೋಳಾರ್, ಪ್ರಥಮ ದರ್ಜೆ ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಡಾ.ಚಿಂತನ ರಾಜೇಶ್, ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ವಿನುತ ಬಿ ಶೆಟ್ಟಿ, ಶೈಕ್ಷಣಿಕ ಮುಖ್ಯಸ್ಥರಾದ ಶ್ರೀಮತಿ ವಿಲ್ಮ ಡಿ’ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














