ಇತರೆ
ಮಣಿಪಾಲ: ಯುವತಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಸರ ಅಪರಹಣ!
Views: 29
ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಆಕೆಯ ಚಿನ್ನದ ಸರ ಕಳವು ಮಾಡಿರುವ ಘಟನೆ ಮಣಿಪಾಲ ಶಾಂತಿನಗರ ಎಂಬಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಅಂಕೋಲ ಮೂಲದ ಯೋಗೀತಾ(23) ಎಂದು ಗುರುತಿಸಲಾಗಿದೆ. ಯೋಗಿತಾ ತನ್ನ ಇಬ್ಬರು ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಬ್ಬರು ಮೇ 12ರಂದು ಸಂಜೆ ರಾತ್ರಿ ಪಾಳಿ ಕೆಲಕ್ಕೆ ಹೋಗಿದ್ದರು. ಅವರಿಬ್ಬರು ಬುಧವಾರ ಬೆಳಗ್ಗೆ ರೂಮಿಗೆ ಬಂದು ನೋಡಿದಾಗ ಯೋಗೀತಾ ಬಿದ್ದುಕೊಂಡಿರುವುದು ಕಂಡುಬಂದಿದೆ.
ಅಪರಿಚಿತರು ರೂಮಿಗೆ ಬಂದು ಯೋಗಿತಾಳಲ್ಲಿರುವ 8 ಗ್ರಾಂ ಬಂಗಾರದ ಸರವನ್ನು ಅಪಹರಿಸಿ, ಬಳಿಕ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ತಲೆಗೆ ಸಿಂಮೆಂಟ್ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ತೀವ್ರವಾಗಿ ಗಾಯ ಗೊಂಡಿರುವ ಯೋಗಿತಾ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






