ಇತರೆ

ನಟ, ನಿರ್ಮಾಪಕ ಹಾಗೂ ಡಬ್ಬಿಂಗ್ ಕಲಾವಿದ ದಿಲೀಪ್ ರಾಜ್ ಹಠಾತ್ ನಿಧನ

Views: 155

ಕನ್ನಡ ಕರಾವಳಿ ಸುದ್ದಿ: ಸದಾ ಉತ್ಸುಕತೆಯಿಂದ ಇರುತ್ತಿದ್ದ ಕನ್ನಡದ ಪ್ರತಿಭಾವಂತ ನಟ, ನಿರ್ಮಾಪಕ ಹಾಗೂ ಡಬ್ಬಿಂಗ್ ಕಲಾವಿದ ದಿಲೀಪ್ ರಾಜ್ ಹಠಾತ್ ನಿಧನಕ್ಕೆ ಅಸಲಿ ಕಾರಣವೇನು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಫಿಟ್‌ನೆಸ್‌ಗೆ ಅತಿ ಹೆಚ್ಚು ಆದ್ಯತೆ ನೀಡುತ್ತಿದ್ದ ನಟ, ಇಂದು ಆಸ್ಪತ್ರೆಗೆ ಹೋಗಬೇಕಿದ್ದ ದಿನವೇ ಕೊನೆಯುಸಿರೆಳೆದಿರುವುದು ವಿಧಿಯ ಕ್ರೂರ ಆಟಕ್ಕೆ ಸಾಕ್ಷಿಯಾಗಿದೆ.

ಕೆಲ ದಿನಗಳ ಹಿಂದೆ ಪ್ರವಾಸಕ್ಕೆಂದು ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ದಿಲೀಪ್ ರಾಜ್‌ಗೆ ಮೊದಲ ಬಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಂದಿನಿಂದ ಆಗಾಗ ಈ ಸಮಸ್ಯೆ ಮರುಕಳಿಸುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ದಿಲೀಪ್, ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ಇದೇ ಉದ್ದೇಶಕ್ಕಾಗಿ ನಟ ಇಂದೇ (ಮೇ 13) ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಪಡೆದಿದ್ದರು. ಆದ್ರೆ ಆಸ್ಪತ್ರೆಗೆ ತೆರಳುವ ಮೊದಲೇ ಸಾವು ದಿಲೀಪ್‌ಗೆ ಬಂದಪ್ಪಳಿಸಿದೆ.

ಮಂಗಳವಾರ ರಾತ್ರಿ ಹಾಯಾಗಿ ನಿದ್ರಿಸಿದ್ದ ದಿಲೀಪ್ ಇಂದು ಮುಂಜಾನೆ 5.30 ರಿಂದ 6 ಗಂಟೆಯ ಅವಧಿಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಹಾಗೇ ಈ ವೇಳೆ ಪತ್ನಿ ವಿದ್ಯಾ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲಿ ʻಹಿಟ್ಲರ್‌ʼ ಪ್ರಾಣಪಕ್ಷಿ ಹಾರಿಹೋಗಿತ್ತು. ಪರೀಕ್ಷಿಸಿದ ವೈದ್ಯರು ದಿಲೀಪ್ ಮೃತಪಟ್ಟಿರುವುದಾಗಿ ಕುಟುಂಬದವರಿಗೆ ಕಹಿಸುದ್ದಿ ತಿಳಿಸಿದರು.

47 ವರ್ಷದ ದಿಲೀಪ್ ರಾಜ್ ಅತ್ಯಂತ ಕಟ್ಟುನಿಟ್ಟಿನ ಆಹಾರ ಕ್ರಮ ಮತ್ತು ವ್ಯಾಯಾಮವನ್ನು ಪಾಲಿಸುತ್ತಿದ್ದರು. ಪ್ರತಿನಿತ್ಯ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ನಟ, ಯುವ ನಟರಿಗೂ ಸವಾಲು ಹಾಕುವಂತಹ ಮೈಕಟ್ಟು ಹೊಂದಿದ್ದರು. ಅಲ್ಲದೇ ದಿಲೀಪ್‌ಗೆ ಯಾವುದೇ ಹಳೆಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ ಎಂದು ಆಪ್ತರು ತಿಳಿಸಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯ ‘ಕೃಷ್ಣ – ರುಕ್ಕು’ ಧಾರಾವಾಹಿಯ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದ AJ ʻಹಿಟ್ಲರ್‌ʼ, ಅರ್ಧದಲ್ಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿರುವುದು ತುಂಬಲಾರದ ನಷ್ಟವಾಗಿದೆ.

Related Articles

Back to top button
error: Content is protected !!