ರಾಜಕೀಯ

ದಳಪತಿ ವಿಜಯ್ ಪಟ್ಟಾಭಿಷೇಕ; ನಟಿ ತ್ರಿಶಾ ಕೃಷ್ಣನ್ ಹಾಜರ್,.ಪತ್ನಿ ಸಂಗೀತಾ ಮತ್ತು ಮಕ್ಕಳು ಎಲ್ಲಿದ್ದಾರೆ?

Views: 64

ಕನ್ನಡ ಕರಾವಳಿ ಸುದ್ದಿ:  ಅಭಿಮಾನಿಗಳ ಸಮ್ಮುಖದಲ್ಲಿ “ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇಡೀ ತಮಿಳುನಾಡು ಸಂಭ್ರಮದಲ್ಲಿ ತೇಲಿತ್ತು. ಆದರೆ, ಈ ಐತಿಹಾಸಿಕ ಕ್ಷಣದಲ್ಲಿ ಒಂದು ದೊಡ್ಡ ಪ್ರಶ್ನೆ ಮಾತ್ರ ಎಲ್ಲರನ್ನು ಕಾಡುತ್ತಿದೆ. ವಿಜಯ್ ಅವರ ಜೀವನದ ಈ ಅತಿದೊಡ್ಡ ಸಾಧನೆಯ ಕ್ಷಣದಲ್ಲಿ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳು ಎಲ್ಲಿದ್ದಾರೆ ಎನ್ನುವುದು.

ಸಮಾರಂಭದಲ್ಲಿ ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿ ಶೋಭಾ ಅವರು ಮಗನ ಗೆಲುವು ನೋಡಿ ಭಾವುಕರಾಗಿ ಕಣ್ಣೀರಿಟ್ಟರು. ಆದರೆ, ಇಡೀ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ಹುಡುಕಿದ್ದು ಮಾತ್ರ ವಿಜಯ್ ಪತ್ನಿ ಸಂಗೀತಾರನ್ನು. ದುರದೃಷ್ಟವಶಾತ್ ಸಂಗೀತಾ ಮತ್ತು ಮಕ್ಕಳು ಇಂದಿನ ಸಮಾರಂಭಕ್ಕೆ ಗೈರಾಗಿದ್ದರು. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ವದಂತಿಗಳಿಗೆ ಕಿಚ್ಚು ಹಚ್ಚಿದೆ.

ಮತ್ತೊಂದೆಡೆ, ಈ ಸಮಾರಂಭಕ್ಕೆ ನಟಿ ತ್ರಿಶಾ ಕೃಷ್ಣನ್ ಅವರ ಎಂಟ್ರಿ ದೊಡ್ಡ ಸುದ್ದಿಯಾಗಿದೆ. ವಿಜಯ್ ಮತ್ತು ತ್ರಿಶಾ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿಗಳು ಕಳೆದ ಕೆಲವು ತಿಂಗಳುಗಳಿಂದ ಕಾಲಿವುಡ್‌ನಲ್ಲಿ ಹರಿದಾಡುತ್ತಲೇ ಇವೆ. ಇಂದು ತ್ರಿಶಾ ಅವರು ಕುಟುಂಬಸ್ಥರಿಗಾಗಿಯೇ ಮೀಸಲಿಟ್ಟಿದ್ದ ಮೊದಲ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು, ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ತ್ರಿಶಾ ಅವರ ನಗುಮುಖದ ಉಪಸ್ಥಿತಿ ಮತ್ತು ವಿಜಯ್ ಕುಟುಂಬದ ಗೈರುಹಾಜರಿ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. “ವಿಜಯ್ ಅವರ ಬದುಕಿನಲ್ಲಿ ತ್ರಿಷಾ ಸ್ಥಾನವೇನು?” ಎಂಬ ಪ್ರಶ್ನೆ ಈಗ ಮನೆಮಾತಾಗಿದೆ.

ಸಂಗೀತಾ ಮತ್ತು ವಿಜಯ್ 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುದೀರ್ಘ 27 ವರ್ಷಗಳ ಕಾಲ ಜೊತೆಯಾಗಿ ಬಾಳಿದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಫೆಬ್ರವರಿಯಲ್ಲೇ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ಧಿ ಹಬ್ಬಿತ್ತು. ಇಂದಿನ ಘಟನೆಗಳನ್ನು ಗಮನಿಸಿದರೆ, ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿರುವುದು ನಿಜವೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಒಂದು ಕಡೆ ರಾಜಕೀಯವಾಗಿ ಉತ್ತುಂಗಕ್ಕೇರಿ ಮುಖ್ಯಮಂತ್ರಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ವಿಜಯ್, ಇನ್ನೊಂದು ಕಡೆ ವೈಯಕ್ತಿಕ ಜೀವನದ ಈ ಗೊಂದಲಗಳಿಂದ ಹೇಗೆ ಹೊರಬರುತ್ತಾರೆ ಎಂಬುದು ಸದ್ಯದ ಕುತೂಹಲ.

Related Articles

Back to top button
error: Content is protected !!