ಇತರೆ

ಕುಂದಾಪುರ:ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ, ಐವರು ಪೊಲೀಸ್ ವಶಕ್ಕೆ

Views: 109

ಕನ್ನಡ ಕರಾವಳಿ ಸುದ್ದಿ: ಎಎಸ್‌ಐ ಪವನ್ ನಾಯಕ್ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡವು ರೌಂಡ್ಸ್ ನಲ್ಲಿರುವಾಗ ನಾಡ ಗ್ರಾಮದ ಕೊಡಗುಂಜಿ ಬ್ರಿಡ್ಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ್ದು, ರತ್ನಾಕರ ಕಾಂಚನ್, ಸಂತೋಷ್ ಪೂಜಾರಿ, ರಾಘವೇಂದ್ರ, ರಾಜೇಶ್ ಪೂಜಾರಿ, ಬಾಬು ಮೊಗವೀರ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಆಟಕ್ಕೆ ಬಳಸಿದ ಪರಿಕರ, 13,020 ರೂ. ನಗದು ವಶಕ್ಕೆ ಪಡೆದಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Back to top button
error: Content is protected !!