ಇತರೆ
ಬಾರ್ಕೂರು: ಬೆಂಗಳೂರಿಗೆ ಕೆಲಸಕ್ಕೆಂದು ಹೋದವರು ಫ್ಯಾಂಟ್, ಶರ್ಟ್, ಚಪ್ಪಲಿ ಮೊಬೈಲ್ ಇಟ್ಟು ನಾಪತ್ತೆ
Views: 60
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಎ.13 ರಂದು ಗುಡ್ಡೆಯಂಗಡಿಯಲ್ಲಿರುವ ಅಂಗಡಿಗೆ ಹೋಗಿ ವ್ಯವಹಾರ ಮಾಡಿದ್ದು ನಂತರ ಕಾಡೂರು ಹೊಳೆಯಲ್ಲಿ ಕಲ್ಲಿನ ಮೇಲೆ ಅವರ ಫ್ಯಾಂಟ್, ಶರ್ಟ್, ಚಪ್ಪಲಿ ಹಾಗೂ ಮೊಬೈಲ್ ಫೋನ್ ಇಟ್ಟು ನಾಪತ್ತೆಯಾಗಿದ್ದಾರೆ.
ಅವರ ಪತ್ತೆಯ ಬಗ್ಗೆ ಎಲ್ಲಾ ಕಡೆ ಹುಡುಕಾಡಿದ್ದು ಅಲ್ಲದೇ ಮುಳುಗು ತಜ್ಞ ಸಹಾಯದಿಂದ ಹೊಳೆಯಲ್ಲಿಯೂ ಕೂಡ ಹುಡುಕಾಡಿಸಿದ್ದಲ್ಲಿ ಇದುವರೆಗೂ ಅವರ ಪತ್ತೆಯಾಗಿರುವುದಿಲ್ಲ
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.






