ಶಿಕ್ಷಣ

ಸುಜ್ಞಾನ ಎಜುಕೇಶನಲ್ ಟ್ರಸ್ಟ್ : ಮಂಥನ 2026 ಬೇಸಿಗೆ ಶಿಬಿರ ಉದ್ಘಾಟನೆ 

Views: 26

ಕನ್ನಡ ಕರಾವಳಿ ಸುದ್ದಿ: ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ, ಸುಜ್ಞಾನ ಪಿ.ಯು. ಕಾಲೇಜು, ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದರ ಜಂಟಿ ಆಶ್ರಯದಲ್ಲಿ ‘ಮಂಥನ 2026 ‘ ಬೇಸಿಗೆ ಶಿಬಿರ ಉದ್ಘಾಟಿಸಲಾಯಿತು.

ಮಾಜಿ ಸಚಿವ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಶಿಬಿರ ಉದ್ಘಾಟಿಸಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಕೆಲಸ ಮನೆಯಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಕ್ರೀಡೆ ಮತ್ತು ಕಲೆ ಶಿಕ್ಷಣದ ಒಂದು ಭಾಗ. ಕೇವಲ ನಮ್ಮಲ್ಲಿ ಬದಲಾವಣೆ ಆದರೆ ಸಾಲದು, ಸಮಾಜದ ಸ್ವಾಸ್ಥ್ಯದ ಬಗ್ಗೆ ಆಲೋಚನೆ ಮಾಡಬೇಕು. ಯೋಚನೆಗಳನ್ನು ಮಾಡಿದಾದ ಯೋಜನೆಗಳು ತನ್ನಿಂದ ತಾನೇ ಬರುತ್ತದೆ ಎಂದರು.

ಖ್ಯಾತ ಚಲನಚಿತ್ರ ನಟಿ ಶ್ರುತಿ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕೇವಲ ಅಂಕವನ್ನು ಮಾತ್ರ ಗೆಲ್ಲೋದಲ್ಲ, ಬದಲಾಗಿ ತಮ್ಮನ್ನು ತಾವು ಗೆಲ್ಲುವ ಹಾಗೆ ಮಕ್ಕಳ ಹೆತ್ತವರು ಚಿಂತನೆ ಮಾಡಬೇಕಾಗಿದೆ. ಈ ಸಮಾಜಕ್ಕೆ ಒಳ್ಳೆಯ ಕ್ರೀಡಾಪಟು, ಸಾಂಸ್ಕೃತಿಕ ವ್ಯಕ್ತಿಯಾಗಿ ತನ್ನ ಬದುಕನ್ನು ತಾನು ಕಟ್ಟಿಕೊಳ್ಳುವಂತಹ ಆತ್ಮಸ್ಥೆರ್ಯ ಇಂತಹ ಶಿಬಿರಗಳಿಂದ ಸಿಗುವಂತಾಗಲಿ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಪಿ. ಚಿತ್ರನಟಿ ಶ್ರುತಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಈ ಬಾರಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಒಂದು ವಾರದ ಶಿಬಿರದಲ್ಲಿ ಯಕ್ಷಗಾನ, ಕಂಬಳದ ಕೆಸರುಗದ್ದೆ ಆಟಗಳು, ಬೂಟ್ ಕ್ಯಾಂಪ್, ಕುಕ್ಕಿಂಗ್ ತರಬೇತಿ ಸೇರಿದಂತೆ 21ಕ್ಕೂ ಹೆಚ್ಚು ವಿಭಿನ್ನ ಚಟುವಟಿಕೆಗಳನ್ನು 50ಕ್ಕೂ ಹೆಚ್ಚು ತಜ್ಞರಿಂದ ನೀಡಲಾಗುತ್ತಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಆನಂದ ಪಿ., ಅಂತಾರಾಷ್ಟ್ರೀಯ ಮಟ್ಟದ ಜಾದೂಗಾರ ಕುದ್ರೋಳಿ ಗಣೇಶ್, ಕ್ಲಾಸ್ 1 ಗುತ್ತಿಗೆದಾರರಾದ ಬಿ.ಅರುಣ್ ಕುಮಾರ್‌ ಹೆಗ್ಡೆ, ಕೋರಿಯೋಗ್ರಾಫರ್‌ ರವಿ, ಮಾಸ್ಟರ್‌ ಡಿಕೆಡಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ ಉಪಸ್ಥಿತರಿದ್ದರು. ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕ ವಿನಯ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Related Articles

Back to top button
error: Content is protected !!