ಶಿಕ್ಷಣ

ಕುಂದಾಪುರ: ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅವಳಿ ಸಹೋದರಿಯರಿಗೆ 10ನೇ ತರಗತಿಯಲ್ಲಿ ಸಮಾನ ಅಂಕ

Views: 94

ಕನ್ನಡ ಕರಾವಳಿ ಸುದ್ದಿ: ಅವಳಿ ಸಹೋದರಿಯರಿಬ್ಬರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಮಾನ ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಮೀಕ್ಷಾ ಮತ್ತು ಪ್ರತೀಕ್ಷಾ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ಮುಗಿಸಿದ್ದು ಬಳಿಕ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಲೆ-ನೆಂಪುವಿನಲ್ಲಿ ಪ್ರೌಢ ಶಿಕ್ಷಣ ಮುಂದುವರಿಸಿದ್ದರು. 

10ನೇ ತರಗತಿ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಹಾಗೂ ಪ್ರತೀಕ್ಷಾ ಎಸ್‌. ಪೂಜಾರಿ ಇಬ್ಬರೂ ಕೂಡ 602 (96.32%) ಅಂಕಗಳನ್ನು ಪಡೆದಿದ್ದಾರೆ.ಇವರಿಬ್ಬರೂ ಕೂಡಾ ಕಲಿಕೆಯಲ್ಲೂ ಸಾಮ್ಯತೆ ಹೊಂದಿದ್ದು ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದಿರುವುದು ವಿಶೇಷವಾಗಿದೆ.

ಹಿಂದಿಯಲ್ಲಿ ಇಬ್ಬರಿಗೂ ಸಮಾನ ಸಮಾನ ಅಂಕ 99 ಬಂದಿದೆ. ಉಳಿದಂತೆ ಪ್ರತೀಕ್ಷಾ/ಸಮೀಕ್ಷಾಗೆ ಇಂಗ್ಲಿಷ್‌ ನಲ್ಲಿ 98 / 97, ಕನ್ನಡ 123/ 124, ಸಮಾಜ ವಿಜ್ಞಾನ 100 /98, ಗಣಿತ 89 / 94 ಮತ್ತು ವಿಜ್ಞಾನದಲ್ಲಿ 93 / 90 ಅಂಕಗಳು ಲಭಿಸಿವೆ.

ಇವರು ಬಸ್ರೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ, ಇಸಿಒ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ್ ಹಾಗೂ ಪ್ರೇಮಾ ದಂಪತಿಯ ಪುತ್ರಿಯರು.

ತಂದೆಯು ಸರಕಾರಿ ಶಾಲೆಯ ಶಿಕ್ಷಕರಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿ ಮಾದರಿಯಾಗಿದ್ದಾರೆ.

 

Related Articles

Back to top button
error: Content is protected !!