ಇತರೆ

ಕುಂದಾಪುರ: ಇಬ್ಬರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ

Views: 105

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ನಿವಾಸಿ, ಪ್ರಸ್ತುತ ಕಟ್ ಬೆಲ್ತೂರು  ಗ್ರಾಮದ ಇಂದಿರಾ ನಗರದಲ್ಲಿ ನೆಲೆಸಿರುವ ರಾಘವೇಂದ್ರ ಅವರ ಪತ್ನಿ ಅನಿತಾ ಆರ್. (36) ಅವರು ಮನೆಯಿಂದ ಎ.22 ರಂದು ಕೆಲಸಕ್ಕೆಂದು ಹೊರಟುವರು ಬಳಿಕ ನಾಪತ್ತೆಯಾಗಿದ್ದಾರೆ.

ಅನಿತಾ ಅವರು ಕುಂದಾಪುರ ತಾ.ಪಂ.ಕಚೇರಿಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡಿಕೊಂಡಿದ್ದಾರೆ. ಎ.22ರ ಬೆಳಗ್ಗೆ ಮನೆಯಿಂದ ತನ್ನಿಬ್ಬರು ಮಕ್ಕಳನ್ನು ಕುಂದಾಪುರಕ್ಕೆ ಕರೆದುಕೊಂಡು ಬಂದಿದ್ದು, ಬಳಿಕ ಆ ಇಬ್ಬರು ಮಕ್ಕಳನ್ನು ಕಾಳಾವರದ ಅಜ್ಜಿ ಮನೆಗೆ ಹೋಗುವ ಬಸ್ಸಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಬೆಳಗ್ಗೆ 11.30ರ ನಂತರ ಅನಿತಾ ಅವರಿಗೆ ಪತಿ ರಾಘವೇಂದ್ರ ಅವರು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ಕೂಡಲೇ ಅವರು ಕುಂದಾಪುರ ತಾ.ಪಂ. ಕಚೇರಿಗೆ ಬಂದು ವಿಚಾರಿಸಿದಾಗ ಈ ದಿನ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದಾರೆ. ಪತಿ ರಾಘವೇಂದ್ರ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!