ಶಿಕ್ಷಣ

SSLC ಫಲಿತಾಂಶ ಪ್ರಕಟ: ಶೇ‌.94.01ರಷ್ಟು ತೇರ್ಗಡೆ, ಏಳು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಕೊನೆ ಸ್ಥಾನ

Views: 105

ಕನ್ನಡ ಕರಾವಳಿ ಸುದ್ದಿ: ಲಕ್ಷಾಂತರ ವಿದ್ಯಾರ್ಥಿಗಳು ಹಾಗು ಪೋಷಕರುಗಳು ಕಾತರದಿಂದ ನಿರೀಕ್ಷಿಸುತ್ತಿರುವ 10ನೇ ತರಗತಿ ಪರೀಕ್ಷೆ – 1ರ ಫಲಿತಾಂಶ ಇಂದು ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಮೊದಲ ಬಾರಿಗೆ ಡಿಜಿ ಲಾಕರ್ನಲ್ಲಿ ಅಂಕಪಟ್ಟಿಯಲ್ಲಿ ಲಭ್ಯವಾಗಲಿವೆ. ಈ ಬಾರಿ 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ ಶೇ‌.94.01ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಈ ಬಾರಿ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ ಎಂದು ಸಚಿವರು ಹೇಳಿದರು.

ಈ ಬಾರಿಯೂ ಬಾಲಕಿಯರೇ ಮೇಲುಗೈ (ಶೇ.96) ಸಾಧಿಸಿದ್ಧಾರೆ. ದಕ್ಷಿಣ ಕನ್ನಡ (98.40) ಮತ್ತು ಉಡುಪಿ (98.18) ಅಗ್ರ ಸ್ಥಾನ ಪಡೆದರೆ, ಕಲಬುರಗಿ (85.06) ಮತ್ತು ಮಧುಗಿರಿ (90.26) ಕೊನೆಯ ಸ್ಥಾನ ಪಡೆದಿವೆ. ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ಧಾರೆ ಎಂದು ಸಚಿವರು ತಿಳಿಸಿದರು.

ಮೇ 18 ರಿಂದ 25ರವರೆಗೆ SSLC ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆ-3 ಇರುವುದಿಲ್ಲ. ಫೇಲಾದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಫಲಿತಾಂಶ ವೃದ್ದಿಗೊಳಿಸಲು ಶುಲ್ಕ ನಿಗದಿಪಡಿಸಲಾಗಿದೆ. ತೃತೀಯ ಭಾಷೆಯಲ್ಲಿ ಫೇಲಾದ ಹಾಗೂ ಫಲಿತಾಂಶ ಸುಧಾರಿಸಲು ಶುಲ್ಕ ವಿಧಿಸಲಾಗಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರು ವಿವರಿಸಿದರು.

Related Articles

Back to top button
error: Content is protected !!