ಶಂಕರನಾರಾಯಣ ಮದರ್ ತೆರೆಸಾ ಪಿಯು ಕಾಲೇಜು: ವಿಜ್ಞಾನ ವಿಭಾಗ (PCMB / PCMCs) ಅತ್ಯುತ್ಕೃಷ್ಟ ಶೈಕ್ಷಣಿಕ ಸಾಧನೆ ಹಾಗೂ ಪ್ರವೇಶಾತಿ ಪ್ರಾರಂಭ
2026–27ನೇ ಸಾಲಿನ ಪ್ರವೇಶ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯಲು ಆಹ್ವಾನಿಸಲಾಗಿದೆ
Views: 0
ಕನ್ನಡ ಕರಾವಳಿ ಸುದ್ದಿ:ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣದಲ್ಲಿ ವಿಜ್ಞಾನಾಧಾರಿತ ಶಿಕ್ಷಣವನ್ನು ಸ್ಪರ್ಧಾತ್ಮಕ ಯುಗದ ಅಗತ್ಯಗಳಿಗೆ ತಕ್ಕಂತೆ ರೂಪಿಸುತ್ತಾ ಬರಲಾಗುತ್ತಿದ್ದು, ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಲಕ್ಷ್ಯಾಧಾರಿತ ಅಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ.
PCMB ಹಾಗೂ PCMCs ಸಂಯೋಜನೆಗಳ ಮೂಲಕ ಪಿಯು ಬೋರ್ಡ್ ಪಠ್ಯಕ್ರಮದ ಜೊತೆಗೆ JEE Mains, NEET ಹಾಗೂ KCET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮನ್ವಯಿತ ತರಬೇತಿ ನೀಡಲಾಗುತ್ತಿದೆ. ಅಧ್ಯಾಯವಾರು ಅಭ್ಯಾಸ, ನಿಯಮಿತ Mock Testಗಳು ಹಾಗೂ ತೀವ್ರ ತರಬೇತಿ ಮೂಲಕ ವಿದ್ಯಾರ್ಥಿಗಳ ಸಿದ್ಧತೆಯನ್ನು ಬಲಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ ನೀಡದೆ, ಸ್ವಾಭಾವಿಕವಾಗಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಉತ್ತಮ ಫಲಿತಾಂಶ ಸಾಧನೆಗೆ ಶ್ರಮಿಸಲಾಗುತ್ತಿದೆ. ಜೊತೆಗೆ ಪಿಯು ಬೋರ್ಡ್ ಪರೀಕ್ಷೆಗೂ ಸಮಾನ ಮಹತ್ವ ನೀಡಲಾಗುತ್ತಿದ್ದು, ಪಠ್ಯಕ್ರಮದ ಅವಿಭಾಜ್ಯ ಭಾಗವಾದ ಪ್ರಯೋಗಾಲಯ ತರಗತಿಗಳನ್ನು ಯಾವುದೇ ತಾತ್ಕಾಲಿಕ ಕ್ರಮಕ್ಕೆ ಸೀಮಿತಗೊಳಿಸದೆ, ವರ್ಷಪೂರ್ತಿ ನಿಯಮಿತವಾಗಿ ಹಾಗೂ ಕ್ರಮಬದ್ಧವಾಗಿ ನಡೆಸಲಾಗುತ್ತಿದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮತೋಲಿತ ಸಾಧನೆಗೆ ಒತ್ತು ನೀಡಲಾಗುತ್ತಿದೆ.
ಕಳೆದ ಶೈಕ್ಷಣಿಕ ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿಯೂ ಹಾಗೂ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿರುವ 20ಕ್ಕೂ ಹೆಚ್ಚು ವರ್ಷಗಳ JEE, NEET, KCET ತರಬೇತಿಯ ಅಪಾರ ಅನುಭವ ಹೊಂದಿರುವ ಶ್ರೀ ಜೈಸನ್ ಬಿ. ಲೂಯಿಸ್ ಅವರ ದಕ್ಷ ನೇತೃತ್ವದಲ್ಲಿ ವಿಜ್ಞಾನ ವಿಭಾಗದಲ್ಲಿ ಹಲವು ಶೈಕ್ಷಣಿಕ ಸುಧಾರಣೆಗಳನ್ನು ಅಳವಡಿಸಲಾಗಿದ್ದು, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಬೋಧನಾ ವ್ಯವಸ್ಥೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಮತ್ತಷ್ಟು ಬಲಪಡಿಸಲಾಗಿದೆ.
ಇದರ ಜೊತೆಗೆ ಈ ಶೈಕ್ಷಣಿಕ ವರ್ಷದಿಂದ ಭಾರತದ ಪ್ರಸಿದ್ಧ ಶಿಕ್ಷಣ ಸಂಸ್ಥೆ ವೇದಾಂತು ಇದರ ಸಹಯೋಗವನ್ನು ಸ್ಥಾಪಿಸಲಾಗಿದ್ದು, KCET, JEE Mains ಹಾಗೂ NEET ಪರೀಕ್ಷೆಗಳಿಗಾಗಿ ಪೂರಕ ಅಧ್ಯಯನ ವೇದಿಕೆ, ದಿನದ 24 ಗಂಟೆಗಳ ಸಂಶಯ ನಿವಾರಣಾ ವ್ಯವಸ್ಥೆ, ನಿಯಮಿತ ಪರೀಕ್ಷಾ ಸರಣಿಗಳು ಹಾಗೂ ರಾಷ್ಟ್ರಮಟ್ಟದ ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ತರಗತಿಗಳ ಜೊತೆಗೆ ಹೆಚ್ಚುವರಿ ಶೈಕ್ಷಣಿಕ ಬೆಂಬಲ ಒದಗಿಸಲಾಗುತ್ತಿದೆ
ಈ ವರ್ಷದ ವಾರ್ಷಿಕ ಪರೀಕ್ಷೆಗೆ ವಿಜ್ಞಾನ ವಿಭಾಗದ 110 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಸಂಜನಾ 595 ಅಂಕಗಳೊಂದಿಗೆ ರಾಜ್ಯದಲ್ಲಿ 5ನೇ, ಜಿಲ್ಲೆ ಹಾಗೂ ತಾಲೂಕಿನಲ್ಲಿ 4ನೇ ರ‍್ಯಾಂಕ್ ಗಳಿಸಿ ಶ್ರೇಷ್ಠ ಸಾಧನೆ ದಾಖಲಿಸಿದ್ದಾಳೆ. ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು 37 ವಿದ್ಯಾರ್ಥಿಗಳು, 80–90% ಅಂಕಗಳನ್ನು 41 ವಿದ್ಯಾರ್ಥಿಗಳು ಹಾಗೂ ಉಳಿದವರು 70–80% ಅಂಕಗಳನ್ನು ಪಡೆದಿದ್ದಾರೆ. ಒಟ್ಟು 56 ಮಂದಿ ಡಿಸ್ಟಿಂಕ್ಷನ್ ಹಾಗೂ 54 ಮಂದಿ ಉನ್ನತ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.
ಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಹಪಾಠ್ಯ ಚಟುವಟಿಕೆಗಳಿಗೂ ಸಮಾನ ಅವಕಾಶ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲಾಗುತ್ತಿದೆ.
ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕುರಿತು ಪೋಷಕರಲ್ಲಿ ವಿಶ್ವಾಸ ಹಾಗೂ ಆಸಕ್ತಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಪಠ್ಯಕ್ರಮದ ಸಮತೋಲಿತ ನಿರ್ವಹಣೆ, ಸ್ಪರ್ಧಾತ್ಮಕ ತರಬೇತಿ ಮತ್ತು ಫಲಿತಾಂಶಗಳ ಸ್ಥಿರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶದ ಬಗ್ಗೆ ಪೋಷಕರ ಸಕಾರಾತ್ಮಕ ಪ್ರತಿಕ್ರಿಯೆ ಹೆಚ್ಚುತ್ತಿದೆ.






