ರಾಜಕೀಯ
ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಇನ್ನಾ ಉದಯ ಶೆಟ್ಟಿ ನಿಧನ
Views: 137
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ಮುಖಂಡ, ಉದ್ಯಮಿ ಇನ್ನಾ ಉದಯ ಶೆಟ್ಟಿ ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಇಂದು ನಿಧನರಾದರು.
ಅವರಿಗೆ 50 ವರ್ಷ ವಯಸ್ಸಾಗಿತ್ತು. ಲಯನ್ಸ್ ಕ್ಲಬ್ ಬೆಲ್ಮಣ್ ಇದರ ಮಾಜಿ ಅಧ್ಯಕ್ಷರಾಗಿದ್ದ ಉದಯ ಶೆಟ್ಟಿ ಅವರು ಪಡುಬಿದ್ರೆಯಲ್ಲಿ ಟಯರ್ ರಿಸೋಲ್ ಅಂಗಡಿಯನ್ನು ಹೊಂದಿದ್ದರು.
ಇವರ ಪತ್ನಿ ರೇಷ್ಮಾ ಉದಯ ಶೆಟ್ಟಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉದಯ್ ಶೆಟ್ಟಿ ಅವರು ಪತ್ನಿ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಬಿಜೆಪಿ ಕಾರ್ಯಕರ್ತರು, ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.






