ಶಿಕ್ಷಣ

ಕುಂದಾಪುರದ ಪ್ರತಿಷ್ಠಿತ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ವಿಶಿಷ್ಠ ಸಾಧನೆ: ರಾಜ್ಯಕ್ಕೆ ದ್ವಿತೀಯ ,ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್

ಹೆಮ್ಮಾಡಿ ಜನತಾ ಕಾಲೇಜಿನ ರಶ್ಮಿ ಪೈ 2ನೇ ರ‍್ಯಾಂಕ್. ಶಮ್ಯ ಶೆಟ್ಟಿ 4ನೇ ರ‍್ಯಾಂಕ್

Views: 238

ಕನ್ನಡ ಕರಾವಳಿ ಸುದ್ದಿ :2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟ ಗೊಂಡಿದ್ದು, ಕುಂದಾಪುರ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಕೇವಲ 45% ನಿಂದ ಹಿಡಿದು 50%, 55%, 60% ಅಂಕ ಪಡೆದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಕಾಲೇಜು ಪ್ರಾರಂಭದಿಂದ ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. 17 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 

ವಿಜ್ಞಾನ ವಿಭಾಗ : ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597,ಅಕ್ಷತಾ ವೀರಣ್ಣ 596,ಪ್ರಜ್ಞಾ ಎಸ್ ಪೂಜಾರಿ 594,ಇಂಚರಾ ಅಶೋಕ್ 594,ಮಾನ್ಯ 592,ಪ್ರಸಾದ್ ಪೂಜಾರಿ 591,ಸ್ಮೃತಿಕಾ 590,ಧನ್ಯ ಬಿಲ್ಲವ 590

ವಾಣಿಜ್ಯ ವಿಭಾಗ:  ಶಮ್ಯ ಶೆಟ್ಟಿ 597,, ಪ್ರಥಮ ಕಾಂಚನ್ 596, ಸುಚಿತ್ರ 595,ಅನ್ವಿತಾ 594,ಸಾನಿಕಾ 593,ಹಿರನ್ಮಯ್ 592, ಕಲ್ಪಿತಾ 592,ಪ್ರೀತನ್ 591, ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಾಂಶುಪಾಲರಾದ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಶೇಕಡಾ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85.90 ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ.

ವಿಜ್ಞಾನ ವಿಭಾಗದ ರಶ್ಮಿ ಪೈ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್

ಎಸ್.ಎಸ್.ಎಲ್.ಸಿ ತನಕ ಸರಕಾರಿ ಶಾಲೆಯಲ್ಲಿ ಓದಿದ್ದ ಇವರು ಪಿಯುಸಿಯನ್ನು ಹೆಮ್ಮಾಡಿಯ ಜನತಾ ಕಾಲೇಜಿನಲ್ಲಿ ಮುಂದುವರಿಸಿದ್ದರು. ಇದೀಗ ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿ.

ಪದವಿ ಪೂರ್ವ ಶಿಕ್ಷಣ ದಲ್ಲಿ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಪಾಠ ಪ್ರವಚನ ಜೊತೆಗೆ ಹೆತ್ತವರ ಪ್ರೋತ್ಸಾಹ ನನಗೆ ನನ್ನ ಸಾಧನೆಗೆ ದಾರಿದೀಪವಾಗಿದೆ.ಮುಂದೆ ಉಪನ್ಯಾಸಕಿ ಆಗುವ ಆಸೆ ಇದೆ ಎನ್ನುತ್ತಾಳೆ ರಶ್ಮಿ ಪೈ.

ವಾಣಿಜ್ಯ ವಿಭಾಗದ ಶಮ್ಯ ಶೆಟ್ಟಿ ರಾಜ್ಯಕ್ಕೆ 4ನೇ ರ‍್ಯಾಂಕ್

ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರಾಂಕ್ ಪಡೆದಿರುವ ಶಮ್ಯ ಶೆಟ್ಟಿ ಬಗ್ವಾಡಿ ಮೆತ್ತಿನಮನೆ ಸುಜಾತ ಸುರೇಂದ್ರ ಶೆಟ್ಟಿ ವರ ಮಗಳಾಗಿದ್ದು, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಹತ್ತನೇ ತರಗತಿ ಮುಗಿಸಿ ಪಿಯು ಶಿಕ್ಷಣಕ್ಕಾಗಿ ಹೆಮ್ಮಾಡಿಯ ಜನತಾ ಪಿಯು ಕಾಲೇಜನ್ನು ಆಯ್ಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಿದ್ದಾಳೆ.

ಪ್ರಾಂಶುಪಾಲರು ಉಪನ್ಯಾಸಕರು, ಹೆತ್ತವರು ತನಗೆ ನೀಡಿದ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ ನನ್ನ ಸಾಧನೆಗೆ ಕಾರಣವಾಗಿದೆ ಎನ್ನುತ್ತಾಳೆ ಶಮ್ಯ ಶೆಟ್ಟಿ ಹಾಗೆ ತಾನು ಮುಂದೆ ಸಿ.ಎ ಮಾಡುವ ಕನಸ್ಸನ್ನು ಹೊಂದಿದ್ದಾಳೆ.

 

Related Articles

Back to top button
error: Content is protected !!