ಶಿಕ್ಷಣ

ಮಾರ್ಚ್ 30ರಂದು ನಡೆಯಬೇಕಿದ್ದ ಎಸ್‌ಎಸ್ಎಲ್‌ಸಿ ಹಿಂದಿ ಪರೀಕ್ಷೆ ದಿನಾಂಕ ಬದಲಾವಣೆ 

Views: 175

ಕನ್ನಡ ಕರಾವಳಿ ಸುದ್ದಿ: ರಾಜ್ಯಾದ್ಯಂತ ಮಾರ್ಚ್ 18ರಿಂದಲೇ ಎಸ್‌ಎಸ್ಎಲ್‌ಸಿ ಪರೀಕ್ಷೆ ಶುರುವಾಗಿದೆ. ಈಗಾಗಲೇ ಕೆಲವು ಪರೀಕ್ಷೆಗಳು ಸುಸೂತ್ರವಾಗಿ ಮುಗಿದಿವೆ. ಮಾರ್ಚ್ 30ರಂದು ನಡೆಯಬೇಕಿದ್ದ ಹಿಂದಿ (ತೃತೀಯ ಭಾಷೆ) ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದೆ.

ಸರ್ಕಾರವು ಮೊದಲು ಮಾರ್ಚ್ 31ರಂದು ನೀಡಿದ್ದ ‘ಮಹಾವೀರ ಜಯಂತಿ’ ರಜೆಯನ್ನು ಈಗ ಮಾರ್ಚ್ 30ಕ್ಕೆ (ಸೋಮವಾರ) ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷಾ ವೇಳಾಪಟ್ಟಿಯಲ್ಲೂ ಚಿಕ್ಕ ಬದಲಾವಣೆ ಮಾಡಿದೆ.

ಹೊಸ ವೇಳಾಪಟ್ಟಿ ಹೀಗಿದೆ:

ಹಳೆಯ ದಿನಾಂಕ: ಮಾರ್ಚ್ 30, ಸೋಮವಾರ (ಈಗ ರಜೆ).

ಹೊಸ ದಿನಾಂಕ: ಮಾರ್ಚ್ 31, ಮಂಗಳವಾರ.

ಸಮಯ: ಎಂದಿನಂತೆ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.

ಗಮನಿಸಿ ಮಾರ್ಚ್ 31ರ ಪರೀಕ್ಷೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಮೊದಲೇ ನಿಗದಿಯಾದ ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿವೆ.

Related Articles

Back to top button
error: Content is protected !!