ರಾಜಕೀಯ

ಇನ್ಮುಂದೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543 ರಿಂದ 816ಕ್ಕೆ, ಕರ್ನಾಟಕ 28 ರಿಂದ 42ಕ್ಕೆ ಏರಿಕೆ?

Views: 46

ಕನ್ನಡ ಕರಾವಳಿ ಸುದ್ದಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಸೌಲಭ್ಯ ನೀಡುವ ವಿಧೇಯಕ ಮತ್ತು ಮತದಾರರ ಸಂಖ್ಯಾವಾರು ಲೋಕಸಭಾ ಕ್ಷೇತ್ರಗಳ ವಿಂಗಡಣೆ ಮತ್ತು ವಿಸ್ತರಣೆಗೆ ಸಂಬಂಧಿಸಿದ ವಿಧೇಯಕವನ್ನು ಪ್ರಸಕ್ತ ಬಜೆಟ್ ಅಧಿವೇಶನ ದಲ್ಲಿಯೇ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಲೋಕಸಭೆ ಕ್ಷೇತ್ರಗಳ ವಿಸ್ತರಣೆಯನ್ನು ಮತದಾರರ ಸಂಖ್ಯೆಯ ಅನುಪಾತದಲ್ಲಿ ನಡೆಸುವುದಾದಲ್ಲಿ ದೇಶದಲ್ಲಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಅಂದಾಜು 816ಕ್ಕೆ (ಪ್ರಸ್ತುತ 543 ಕ್ಷೇತ್ರಗಳ ಸಂಖ್ಯೆಯ ಶೇ.50ರಷ್ಟು) ಹೆಚ್ಚಳ ವಾಗುವ ನಿರೀಕ್ಷೆ ಇದೆ. ಇದೇ ಲೆಕ್ಕಾಚಾರ ದ ಲ್ಲಿಯೇ ಮುಂಜಾರೂಕತಾ ಕ್ರಮವಾಗಿ ನೂತನ ಸಂಸತ್ ಭವನದಲ್ಲಿನ ಲೋಕಸಭಾ ಸದನದ ಆಸನಗಳ ಸಂಖ್ಯೆಯನ್ನು 888ರ ವರೆಗೂ ಇರುವಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.

ವಿಸ್ತಾರದಲ್ಲಿ ದೇಶದಲ್ಲಿಯೇ ಅತಿದೊಡ್ಡ ಪ್ರದೇಶ, ಅತ್ಯಧಿಕ ಜನಸಂಖ್ಯೆಯ(25 ಕೋಟಿ) ರಾಜ್ಯ ಎನಿಸಿದ ಉತ್ತರ ಪ್ರದೇಶ ದಲ್ಲಿನ ಲೋಕ ಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 80 ಕ್ಷೇತ್ರಗಳಿಗೆ ಬದಲಾಗಿ 120 ಕ್ಷೇತ್ರಗಳಿಗೆ ಹೆಚ್ಚಲಿದೆ. ಅಂದರೆ, ಹಿಂದಿ ಭಾಷೆಯೇ ಪ್ರಧಾನವಾಗಿರುವ ಈ ದೊಡ್ಡ ರಾಜ್ಯಕ್ಕೆ 40 ಕ್ಷೇತ್ರಗಳಷ್ಟು ಹೆಚ್ಚುವರಿ ಕ್ಷೇತ್ರಗಳು ಸಿಗಲಿವೆ. ಅಲ್ಲದೇ, 120ರಲ್ಲಿ 40. ಲೋಕಸಭಾ ಕ್ಷೇತ್ರಗಳು ಮಹಿಳೆಯರಿಗೇ ಮೀಸ ಲಾಗಿರಲಿವೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆಗಳ ಹೆಚ್ಚಳದಲ್ಲಿ ಮಹಾರಾಷ್ಟ್ರ ರಾಜ್ಯಕ್ಕೂ 72 ಕ್ಷೇತ್ರ ಗಳಷ್ಟು ದೊಡ್ಡ ಪಾಲು ಸಿಗಲಿದೆ. ಪಶ್ಚಿವ ಬಂಗಾಳದಲ್ಲಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ 63ಕ್ಕೆ ಏರಿಕೆಯಾಗಲಿದೆ.

ದಕ್ಷಿಣ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚು ಲಾಭವಾಗುವುದು ತಮಿಳು ನಾಡಿಗೆ. ಸದ್ಯ ತಮಿಳುನಾಡಿನಲ್ಲಿ 39 ಲೋಕ ಸಭಾ ಕ್ಷೇತ್ರಗಳಿವೆ. ಮತದಾರರ ಹೊಸ ಅನುಪಾತ ಲೆಕ್ಕದಲ್ಲಿ ರಾಜ್ಯದಲ್ಲಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ 59ಕ್ಕೆ ಮುಟ್ಟಲಿದೆ. ಕರ್ನಾಟಕದಲ್ಲಿನ 28 ಲೋಕಸಭಾ ಕ್ಷೇತ್ರಗಳು 42ಕ್ಕೆ ಏರಿಕೆಯಾಗಲಿವೆ. ಪುಟ್ಟ ಕೇರಳದಲ್ಲಿಯೂ 30 ಲೋಕಸಭಾ ಕ್ಷೇತ್ರಗಳು ರೂಪುಗೊಳ್ಳಲಿವೆ.

Related Articles

Back to top button
error: Content is protected !!