ಆರೋಗ್ಯ

ಜ್ಯೂನಿಯರ್ ವೈದ್ಯನ ಜೊತೆಗೆ ಸಲುಗೆ ಪ್ರೀತಿ ನಾಟಕವಾಡಿ ಸೀನಿಯರ್ ವೈದ್ಯೆ ಬಲಿ

Views: 141

ಕನ್ನಡ ಕರಾವಳಿ ಸುದ್ದಿ: ಸೀನಿಯರ್ ವೈದ್ಯೆ ಮೇಲೆ ಲವ್ ಆತ್ಮಹತ್ಯೆ ನಾಟಕವಾಡಿ, ಕಾಮುಕ ವೈದ್ಯನ ಕಪಿಮುಷ್ಠಿಗೆ ಸಿಲುಕಿ ಯುವವೈದ್ಯೆ ಬದುಕು ಕಳೆದುಕೊಂಡಿದ್ದಾರೆ. 12 ವರ್ಷಗಳ ಕಾಲ ನೆನಪಿನ ಶಕ್ತಿಯೇ ಇಲ್ಲದೆ ಜೀವಂತ ಶವವಾಗಿ ಬದುಕಿದ್ದ ಯುವ ವೈದ್ಯೆ ಸಾವನ್ನಪ್ಪಿದ್ದಾರೆ.

ವೈದ್ಯನ ಕರಾಳ ಮುಖ ಬಟಾಬಯಲಾಗಿದೆ. ಡಾ. ನಾಗಶ್ರೀ ಕಾಮುಕ ವೈದ್ಯನಿಂದ ಮೃತಪಟ್ಟ ನತದೃಷ್ಠ ಯುವವೈದ್ಯೆ. ಸೀನಿಯರ್‌ ವೈದ್ಯೆಯನ್ನ ಜೂನಿಯರ್ ಡಾ. ವಿನಯ್ ಕುಮಾರ್ ಎಸ್ ಲವ್ ಮಾಡಿದ್ದರು. ಅಮಾಯಕರಿಗೆ ಪ್ರೀತಿಯ ಗಾಳ ಹಾಕಿ ತನ್ನ ಕಾಮುದಾಸೆಯನ್ನು ಕಾಮುಕ ವೈದ್ಯ ವಿನಯ್ ಕುಮಾರ್ ಎಸ್ ತೀರಿಸಿಕೊಳ್ಳುತ್ತಿದ್ದರು. ಇತನ ಕಾಮದಾಸೆಗೆ ಅಮಾಯಕ ಜೀವ ಬಲಿಯಾಯಿತು.

ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಡಾ. ನಾಗಶ್ರೀ ಆಯುರ್ವೇದ ವಿಭಾಗದಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದರು. ಇದೇ ವೇಳೆ ಜ್ಯೂನಿಯರ್ ವೈದ್ಯ ಡಾ. ವಿನಯ್ ಕುಮಾರ್ ಎಸ್ ಪರಿಚಯವಾಗಿದ್ದರು. ಡಾ. ನಾಗಶ್ರೀ ಜೊತೆಗೆ ಸಲುಗೆ ಪ್ರೀತಿ ನಾಟಕವಾಡಿ, ಬಳಿಕ ವಯಸ್ಸಿನಲ್ಲಿ ದೊಡ್ಡವಳು ಮನೆಯಲ್ಲಿ ಒಪ್ಪಲ್ಲ ಅಂತಾ ನಾಟಕವಾಡಿದ್ದಾನೆ.

ಬಳಿಕ ಶ್ರೀರಂಗಪಟ್ಟಣ ಲಾಡ್ಜ್ ಗೆ ಕರೆದೊಯ್ದು ಸಾಯೋ ನಾಟಕವಾಡಿ, ಡಾ. ನಾಗಶ್ರೀಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ಆರೋಪಿ ನೀಡಿದ್ದಾನೆ. ಈ ವೇಳೆ ತಾನೂ ಕೂಡ ಆತ್ಮಹತ್ಯೆ ಪ್ರಯತ್ನದ ನಾಟಕವಾಡಿ, ಬಳಿಕ ಘಟನೆಯಿಂದ ವೈದ್ಯೆ ಕೋಮಕ್ಕೆ ಜಾರಿದ್ದರು. ಒಂದೇ ದಿನದಲ್ಲಿ ಈತ ಆಸ್ಪತ್ರೆಯಿಂದ ಡಿರ್ಚಾರ್ಜ್. ಕೋಮದಿಂದ ಹೊರಬಂದು 12 ವರ್ಷಗಳ ಕಾಲ ಜೀವಂತ ಶವವಾಗಿ ನಾಗಶ್ರೀ ನಿಧನ ಹೊಂದಿದ್ದಾರೆ.

ಡಾ. ವಿನಯ್ ಕುಮಾರ್ ನಿಂದ ಪ್ರಾಣ ಕಳೆದುಕೊಂಡಿದ್ದ ಚಾರ್ಟೆಡ್ ಅಕೌಂಟೆಡ್ ಗೌತಮಿ ಹಿರೇಮಠ. ಗೌತಮಿ ಹಿರೇಮಠ ಕೇಸ್ ನಲ್ಲಿ ಸದ್ಯ ಬಿ. ರಿಪೋರ್ಟ್. ಎರಡೂ ಆದ ಬಳಿಕ ವಿನೋದಾ ಎಂಬಾಕೆ ಜೊತೆ ಮದುವೆಯಾಯಿತು. ವೈದ್ಯನ ಕಿರುಕುಳ ತಾಳಲಾರದೆ ವೈದ್ಯನನ್ನ ವಿನೋದ ಬಿಟ್ಟರು. ಕೇವಲ 15 ದಿನಕ್ಕೆ ಕಾಮುಕನ ಕಿರುಕುಳಕ್ಕೆ ವಿನೋದ ನೊಂದರು. ಹುಣಸೂರು ತಾಲ್ಲೂಕಿನ ಹನಗೂಡಿನಲ್ಲಿ ವೈದ್ಯ ವಿನಯ್ ಕುಮಾರ್ ಕ್ಲಿನಿಕ್ ನಡೆಸುತ್ತಿದ್ದರು. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ವಕೀಲ ಪಾಂಡು ಪೂಜಾರಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Related Articles

Back to top button
error: Content is protected !!